ಮಂಗಳೂರು: ಮಂಗಳೂರಿನ ಜೆನೆಸಿಸ್ ಪ್ರಕಾಶನದ ವ್ಯವಸ್ಥಾಪಕ ಮಾರ್ಸೆಲ್ ಎಂ. ಡಿಸೋಜ (ಮಿಚ್ಚಾ ಮಿಲಾರ್) ಬರೆದಿರುವ 400 ಚುಟುಕುಗಳ ಸಂಕಲನ ‘ಚುಟುಕಾಂ’ ಇದರ ಲೋಕಾರ್ಪಣಾ ಸಮಾರಂಭವು 21 ಸೆಪ್ಟೆಂಬರ್ 2024ರ ಶನಿವಾರದಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು.
ಪುಸ್ತಕ ಲೋಕಾರ್ಪಣೆಗೊಳಿಸಿದ ಎಂ. ಸಿ. ಸಿ. ಬ್ಯಾಂಕ್ ಇದರ ಅಧ್ಯಕ್ಷರಾದ ಅನಿಲ್ ಲೋಬೋ ಮಾತನಾಡಿ “ಕೊಂಕಣಿ ಭಾಷಿಕರಿಗೆ ಅತ್ಯುತ್ತಮ ಸಂದೇಶ ನೀಡುವ ಕೃತಿ ಇದಾಗಿದೆ. ಕೊಂಕಣಿ ಭಾಷೆಯಲ್ಲಿ ಬರೆಯುವವರ ಸಂಖ್ಯೆ ಕಡಿಮೆಯಾಗಿದ್ದು, ಮಾರ್ಸೆಲ್ ಅವರ ಈ ಕೃತಿಯು ಯುವಕರಿಗೆ ಮಾರ್ಗದರ್ಶನವಾಗಲಿದೆ.” ಎಂದರು.
ಲೇಖಕರಾದ ಮಾರ್ಸೆಲ್ ಡಿ’ಸೋಜಾ ಮಾತನಾಡಿ “ಕೊಂಕಣಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 15 ಪುಸ್ತಕಗಳನ್ನು ಹಾಗೂ ಇಂಗ್ಲಿಷ್‌ನಲ್ಲಿ 2 ಪುಸ್ತಕಗಳನ್ನು ಈವರೆಗೆ ಪ್ರಕಟಿಸಿದ್ದೇನೆ. ಮುಂದಿನ ದಿನಗಳಲ್ಲಿ ಮಕ್ಕಳಿಗಾಗಿ ಮೂರು ಪುಸ್ತಕ ಬಿಡುಗಡೆಯಾಗಲಿದೆ. ‘ಚುಟುಕಾಂ’ ಕೃತಿಯಲ್ಲಿ 400 ಚುಟುಕುಗಳಿವೆ.” ಎಂದರು.
ಅತಿಥಿಗಳಾಗಿ ಹಿರಿಯ ಕೊಂಕಣಿ ಸಾಹಿತಿ ಜೆ. ಎಫ್. ಡಿ’ಸೋಜಾ, ಕಲ್ಲಚ್ಚು ಪ್ರಕಾಶನದ ವ್ಯವಸ್ಥಾಪಕ ಮಹೇಶ್ ನಾಯಕ್, ಮಾರ್ಸೆಲ್ ಡಿ’ಸೋಜಾ ಇವರ ಪತ್ನಿ ಜಾನೆಟ್ ಡಿ’ಸೋಜಾ ಉಪಸ್ಥಿತರಿದ್ದರು.