6 ಮಾರ್ಚ್ 2023, ಮಂಗಳೂರು: ಇದೊಂದು ವಿಶೇಷ ಸಂದರ್ಭ, ಒಂದು ಅಪೂರ್ವ ಸಂಗೀತ ಕಾರ್ಯಕ್ರಮಕ್ಕೆ ಮಂಗಳೂರು ಸಾಕ್ಷಿಯಾಗಲಿದೆ. ವರಾಹ ರೂಪಂ ವ್ಹಾ..ಪೊರ್ಲುಯಾ ಕಾರ್ಯಕ್ರಮದ ಈ ಶೀರ್ಷಿಕೆಯೇ ಕುತೂಹಲ ಹುಟ್ಟಿಸಿದೆ. ಜಗತ್ತಿನಾದ್ಯಂತ ತುಳುವರನ್ನು ರೋಮಾಂಚನ ಗೊಳಿಸಿದ್ದ “ವ್ಹಾ ಪೊರ್ಲುಯಾ” ಎಂಬ ಹಾಡು ಆಗಲೇ “ಇದು ಹೇಗೆ ಎಲ್ಲಿಂದ ಯಾರಿಂದ ಹುಟ್ಟಿಕೊಂಡಿತು”..? ಎಂಬ ಊಹೆಗಳನ್ನು ಹುಟ್ಟಿಸಿಹಾಕಿತ್ತು. ಹಿರಿಯರೋರ್ವರು ಇದು ಶತಮಾನದ ಹಾಡು ಎಂದಿದ್ದರು. ಈಗ ಹಲವಾರು ವರ್ಷಗಳ ಬಳಿಕ (15 ಅಥವಾ 16 ವರ್ಷಗಳು) “ವರಾಹ ರೂಪಂ” ಎನ್ನುವ ಹಾಡು ಜಗತ್ತಿನಾದ್ಯಂತ ಇಡೀ ದೇಶದ ಸಂಗೀತ ಪ್ರೇಮಿಗಳು ಹುಬ್ಬೇರಿಸುವಂತೆ ಮಾಡಿದೆ. ಸಂಗೀತ, ಸಾಹಿತ್ಯ, ಹಾಡುಗಾರಿಕೆ ಒಂದಕ್ಕೊಂದು ಮಿಗಿಲು. ಈ ಹಾಡಿನಿಂದ ಪ್ರೇರಣೆಗೊಂಡ ಸಂಗೀತಕಾರರುಗಳು ತಾವೂ ತಮ್ಮದೇ ರೀತಿಯಲ್ಲಿ ಹಾಡಿ, ಭಾರಿಸಿ ಆಸ್ವಾದಿಸಿಕೊಂಡಿದ್ದಾಗಿದೆ. ಈ ಎರಡೂ ಹಾಡುಗಳಲ್ಲಿ ಜಾನಪದ ಮತ್ತು ಶಾಸ್ತ್ರೀಯ ಸಂಗೀತದ ಮೂಲ ಸತ್ವಗಳು ಅಡಕವಾಗಿರುವುದು ಮತ್ತೊಂದು ವಿಶೇಷ.
ಎರಡೂ ಹಾಡುಗಳ ಮೂಲ ಗಾಯಕರು, ಹಾಡು ಬರೆದಿರುವ ಸಾಹಿತಿ ಇವರ ಒಗ್ಗೂಡುವಿಕೆಯ ಸಂಗೀತ ಕಾರ್ಯಕ್ರಮ ಮಂಗಳೂರಿನ ಗರೋಡಿಯಲ್ಲಿ ದಿನಾಂಕ 06-03-2023ರ ಸಂಜೆ ನಡೆಯಲಿದೆ.
Subscribe to Updates
Get the latest creative news from FooBar about art, design and business.
ವರಾಹ ರೂಪಂ.. ವ್ಹಾ ಪೊರ್ಲುಯಾ.. – ಅಪೂರ್ವ ಸಂಗೀತ ಕಾರ್ಯಕ್ರಮ – ಮಾರ್ಚ್ 6ಕ್ಕೆ
Next Article ಉಡುಪಿ ಜಾನಪದ ಹಬ್ಬ 2023