ಜರ್ಮನಿ : ಅಮೆರಿಕದಲ್ಲಿ 75 ದಿನಗಳ ಯಕ್ಷಯಾನವನ್ನು ಯಶಸ್ವಿಯಾಗಿ ಪೂರೈಸಿ ಯಕ್ಷಗಾನದ ಕೀರ್ತಿಪತಾಕೆಯನ್ನು ವಿದೇಶಗಳಲ್ಲಿ ಹಾರಿಸಿ ಅನೇಕ ದಾಖಲೆಗಳೊಂದಿಗೆ (ಜುಲೈ 27ರಂದು ಕ್ಯಾಲಿಫೋರ್ನಿಯ ರಾಜ್ಯದ ಫೀನಿಕ್ಸ್ ನಗರದಲ್ಲಿ ಹಾಗೂ ಅಗಸ್ಟ್ 18ರಂದು ವಿಸ್ಕಾನ್ಸಿನ್ ರಾಜ್ಯದ ಬ್ರೂಕ್ ಫೀಲ್ಡ್ ನಗರದಲ್ಲಿ ಅಲ್ಲಿನ ಮೇಯರುಗಳಿಂದ ಅಧಿಕೃತವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಡೇ ಎಂಬ ಘೋಷಣೆ) ತಾಯ್ನಾಡಿಗೆ ಮರಳಿದ ಬೆನ್ನಲ್ಲೇ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಇವರ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಯೂರೋಪ್ ಘಟಕದ ಉದ್ಘಾಟನ ಸಮಾರಂಭವು ದಿನಾಂಕ 3 ಅಕ್ಟೋಬರ್ 2024 ಗುರುವಾರದಂದು ಜರ್ಮನಿಯಲ್ಲಿ ನೆರವೇರಲಿದೆ.
ಈ ಮೂಲಕ ಯೂರೋಪ್ ರಾಷ್ಟ್ರದಲ್ಲಿ ಪ್ರಾರಂಭವಾಗುವ ಕರಾವಳಿ ಮೂಲದ ಟ್ರಸ್ಟ್ ಎಂಬ ಹೆಗ್ಗಳಿಕೆ ನಮ್ಮೆಲ್ಲರ ಹೆಮ್ಮೆಯಾಗಲಿದೆ. ಈ ಟ್ರಸ್ಟಿನ ಘಟಕ ಪ್ರಾರಂಭಿಸುವಲ್ಲಿ ಸಹಕರಿಸಿದ ಯೂರೋಪ್ ಘಟಕದ ಅಧ್ಯಕ್ಷರಾದ ಶ್ರೀ ನರೇಂದ್ರ ಶೆಣೈ ಕೊಪ್ಪ, ಕಾರ್ಯದರ್ಶಿಗಳಾದ ಶ್ರೀ ಅಜಿತ್ ಪ್ರಭು ತಲ್ಲೂರು, ಜೊತೆಕಾರ್ಯದರ್ಶಿ ಶ್ರೀ ಅರವಿಂದ ಸುಬ್ರಹ್ಮಣ್ಯ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಪಟ್ಲ ಟ್ರಸ್ಟಿನ ಕೇಂದ್ರೀಯ ಸಮಿತಿಯ ಪರವಾಗಿ ಹೃದಯಾಂತರಾಳದ ಅಭಿನಂದನೆಗಳು ಮತ್ತು ಧನ್ಯವಾದಗಳು.