ತೆಕ್ಕಟ್ಟೆ: ನವರಾತ್ರಿಯ ಸಂದರ್ಭಗಳಲ್ಲಿ ಬಹಳ ಹಿಂದಿನ ಕಾಲದಿಂದಲೂ ಯಕ್ಷಗಾನ ಪ್ರಕಾರವಾದ ಹೂವಿನಕೋಲು ಕಾರ್ಯಕ್ರಮವನ್ನು ಅಭಿಯಾನ ರೂಪದಲ್ಲಿ ಕಳೆದ ಹಲವು ವರ್ಷಗಳಿಂದ ಮನೆ ಮನೆಗೆ ತೆರಳಿ ಕಲೆಯನ್ನು ಉಳಿಯುವಂತೆ ಮಾಡಿದ ಹೆಗ್ಗಳಿಕೆ ಯಶಸ್ವೀ ಕಲಾವೃಂದ ಕೊಮೆಯದ್ದು. ಸಂಸ್ಥೆಯ ಬೆಳ್ಳಿ ಹಬ್ಬದ ಸಂಭ್ರಮದ ಈ ಸಂದರ್ಭದಲ್ಲಿ ನವರಾತ್ರಿಯ 03 ಅಕ್ಟೋಬರ್ 2024 ರಿಂದ 12 ರ ವರೆಗೆ ಕುಂದಾಪುರ, ಉಡುಪಿ, ಮಂಗಳೂರು ಬೈಂದೂರು, ಮಾರಣಕಟ್ಟೆ ಹೀಗೆ ಹಲವು ಕಡೆಗಳಲ್ಲಿ ಮಕ್ಕಳನ್ನು ನಾಲ್ಕು ತಂಡವಾಗಿ ‘ಮನೆ ಮನೆಗಳಲ್ಲಿ ಹೂವಿನಕೋಲು ಅಭಿಯಾನ’ ಕಾರ್ಯಕ್ರಮಕ್ಕಾಗಿ ಯಶಸ್ವೀ ಕಲಾವೃಂದದ ತಂಡಗಳು ಹೊರಡಲಿವೆ. ಮನೆಯ ಮನಗಳಲ್ಲಿ ಸಂತಸ, ಧನಕನಕ ಹೆಚ್ಚಲೆಂದು ಹಾರೈಸುವ ಚೌಪದಿಯ ಸಾಲನ್ನು ಗೊಣಗುತ್ತ ಸಾರುವ ಈ ಕಾರ್ಯಕ್ರಮವನ್ನು ಆಸಕ್ತರ ಮನೆಯಲ್ಲಿ ನಡೆಸಲಾಗುವುದು. ಕಾರ್ಯಕ್ರಮ ನೆರವೇರಿಸುವ ಅಪೇಕ್ಷೆ ಇದ್ದರೆ 9945947771 ಈ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಯಶಸ್ವೀ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ ತಿಳಿಸಿದ್ದಾರೆ.