ಮೈಸೂರು : ನಿರಂತರ ಫೌಂಡೇಶನ್ (ರಿ.), ಪ್ರಥ್ವಿ ಟ್ರಸ್ಟ್ (ರಿ.) ಮತ್ತು ಕಲಾಸುರುಚಿ ಇವುಗಳ ಸಹಯೋಗದಲ್ಲಿ ಉಮೇಶ್ ತೆಂಕನಹಳ್ಳಿಯವರ ‘ಕಪ್ಪು ಹಲ್ಲಿನ ಕಥೆ’ ಎಂಬ ಕಾದಂಬರಿಯ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 06 ಅಕ್ಟೋಬರ್ 2024ರಂದು ಬೆಳಿಗ್ಗೆ 11-00 ಗಂಟೆಗೆ ಮೈಸೂರಿನ ಕುವೆಂಪು ನಗರ, ಚಿತ್ರಭಾನು ರಸ್ತೆ, ಸುರುಚಿ ರಂಗಮನೆಯಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಕವಯಿತ್ರಿ ಪ್ರೊ. ಚ. ಸರ್ವಮಂಗಳ, ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಡಾ. ಎಚ್.ಎಲ್. ನಾಗರಾಜ್, ಮೈಸೂರಿನ ಕನ್ನಡಪ್ರಭ ಸ್ಥಾನಿಕ ಸಂಪಾದಕರಾದ ಶ್ರೀ ಅಂಶಿ ಪ್ರಸನ್ನ ಕುಮಾರ್, ಹಿರಿಯ ಕಲಾವಿದರಾದ ಶ್ರೀ ಮಂಡ್ಯ ರಮೇಶ್ ಮತ್ತು ಲೇಖಕ ಶ್ರೀ ಉಮೇಶ್ ತೆಂಕನಹಳ್ಳಿ ಇವರುಗಳು ಭಾಗವಹಿಸಲಿರುವರು.