ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ಉದಯರಾಗ – 56’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ಸುರತ್ಕಲ್ಲಿನ ಫ್ಲೈ ಓವರಿನ ತಳಭಾಗದಲ್ಲಿ ಎಂ.ಸಿ.ಎಫ್. ನಾಗರಿಕ ಸಲಹಾ ಸಮಿತಿ ಸಾಂಸ್ಕೃತಿಕ ವೇದಿಕೆಯಲ್ಲಿ ದಿನಾಂಕ 6 ಅಕ್ಟೋಬರ್ 2024ರಂದು ಬೆಳಗ್ಗೆ 6-00 ಗಂಟೆಗೆ ನಡೆಯಲಿದೆ.
ವಿದುಷಿ ಪ್ರಾರ್ಥನಾ ಸಾಯಿ ನರಸಿಂಹನ್ ಇವರ ಶಿಷ್ಯೆ ಚೆನ್ನೈಯ ನಮೃತಾ ಎಸ್. ಇವರ ಹಾಡುಗಾರಿಕೆಗೆ ಪುತ್ತೂರಿನ ಅನನ್ಯ ಪಿ.ಎಸ್. ಮಯಲಿನ್ ಮತ್ತು ಆಚಿಂತ್ಯ ಕೃಷ್ಣ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ಕುಳಾಯಿಯ ನಿವೃತ್ತ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಶ್ರೀನಿವಾಸ ರಾವ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.
ಮಣಿ ಕೃಷ್ಣಸ್ವಾಮಿ ಆಕಾಡೆಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್ ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.