ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತು (ರಿ.) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಜಿಲ್ಲಾ ಗಮಕ ಪರಿಷತ್ ವಿಜಯಪುರ ಇವರ ಸಂಘಟನೆಯಲ್ಲಿ ಏರ್ಪಡಿಸಿದ ‘ಗಮಕ ವಾಚನ – ವ್ಯಾಖ್ಯಾನ ಕಾರ್ಯಕ್ರಮ’ವು ದಿನಾಂಕ 05 ಅಕ್ಟೋಬರ್ 2024ರಂದು ಮುಂಜಾನೆ 11-00 ಗಂಟೆಗೆ ವಿಜಯಪುರದ ವಜ್ರ ಹನುಮಾನ ನಗರ, ಶ್ರೀ ಶಂಕರಮಠದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಪುರದ ಶ್ರೀ ಶಂಕರಮಠದ ಅಧ್ಯಕ್ಷರಾದ ಶ್ರೀ ಮಹೇಶ್ ದೇಶಪಾಂಡೆ ಇವರು ವಹಿಸಲಿದ್ದು, ಶ್ರೀ ಕನಕದಾಸರ ‘ನಳ ದಮಯಂತಿ ಚರಿತ್ರೆ’ ಕಾವ್ಯದಲ್ಲಿ ‘ನಳ ದಮಯಂತಿ ವಿವಾಹ ಸಮಾರಂಭ’ದ ವಾಚನವನ್ನು ಶ್ರೀಮತಿ ಪುಷ್ಪಾ ಕುಲಕರ್ಣಿ ಮತ್ತು ಶ್ರೀಮತಿ ಭೂದೇವಿ ಕುಲಕರ್ಣಿ ಹಾಗೂ ವ್ಯಾಖ್ಯಾನವನ್ನು ಶ್ರೀ ಕಲ್ಯಾಣರಾವ್ ದೇಶಪಾಂಡೆ ಇವರು ನಿರ್ವಹಿಸಲಿರುವರು.