ತೆಕ್ಕಟ್ಟೆ: ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದ ಸಿನ್ಸ್ 1999 ಶ್ವೇತಯಾನ-63ರ ಕಾರ್ಯಕ್ರಮದಡಿಯಲ್ಲಿ ನವರಾತ್ರಿ ಸಂದರ್ಭದಲ್ಲಿನ ಕಲಾ ಪ್ರಕಾರ ‘ಹೂವಿನಕೋಲು’ ಅಭಿಯಾನದ ಉದ್ಘಾಟನಾ ಸಮಾರಂಭವು ದಿನಾಂಕ 03 ಅಕ್ಟೋಬರ್ 2024 ರಂದು ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಆನೆಗುಡ್ಡೆ ವಿನಾಯಕ ದೇಗುಲದ ಪ್ರಧಾನ ಅರ್ಚಕರಾದ ಕೃಷ್ಣಾನಂದ ಉಪಾಧ್ಯ ಮಾತನಾಡಿ “ಮಕ್ಕಳ ಕಲಾಸಕ್ತಿಯನ್ನು ಉತ್ತೇಜಿಸುವ ಕಾರ್ಯಕ್ರಮ ಹೂವಿನಕೋಲು. ನಾಡಿನಾದ್ಯಂತ ಹಲವು ವರ್ಷಗಳಿಂದ ಹೂವಿಕೋಲು ತಂಡವನ್ನು ಮನೆ ಮನೆಗಳಿಗೆ ಕೊಂಡೊಯ್ದು ಯಕ್ಷ ಕಲಾ ಪ್ರಕಾರವನ್ನು ಬಿತ್ತರಗೊಳಿಸುವುದರ ಜೊತೆಗೆ ಮಕ್ಕಳನ್ನು ಬೆಳೆಸಿ ನಾಡಿಗೆ ಕೊಡುವ ಕಾಯಕವನ್ನು ಯಶಸ್ವೀ ಕಲಾವೃಂದ ಕೊಮೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ. ನಾಲ್ಕು ತಂಡಗಳಾಗಿ ಮಾಡಿಕೊಂಡು ಕರಾವಳಿ ಭಾಗದ ಹಲವು ಕಡೆಗಳಲ್ಲಿ ಕರಾವಳಿಯ ಕಂಪನ್ನು ಸೊಗಸಾಗಿ ಮಕ್ಕಳ ಮೂಲಕ ಬಿತ್ತರಿಸುವ ಕಾರ್ಯ ಬೆರಗು ಮೂಡಿಸುವಂತಹುದು.” ಎಂದರು.
ಯಶಸ್ವೀ ಕಲಾವೃಂದದ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ ಮಲ್ಯಾಡಿ ಮಾತನಾಡಿ “ಕಲಾ ಪ್ರಪಂಚದಿಂದ ಮರೆಯಾಗಿದ್ದ ಕಲೆ ಹೂವಿನಕೋಲು. ಈ ಕಲೆಯನ್ನು ಕಳೆದ ಹಲವಾರು ವರ್ಷಗಳಿಂದ ಸಂಸ್ಥೆ ಆಯ್ದ ಮನೆಗಳಲ್ಲಿ ಹೂವಿನಕೋಲು ಕಲಾ ಪ್ರಕಾರವನ್ನು ಪ್ರಚುರ ಪಡಿಸುತ್ತ ಮುನ್ನಡೆಸಿದೆ. ಈ ಕಲೆಯನ್ನು ಉಳಿಸುವಲ್ಲಿ ಬಹಳಷ್ಟು ಶ್ರಮಿಸುತ್ತಿರುವ ಹೆಮ್ಮೆ ನಮ್ಮ ಸಂಸ್ಥೆಗೆ.” ಎಂದರು
ಶ್ರೀರಮಣ ಉಪಾಧ್ಯಯ, ಆಡಳಿತ ಮಂಡಳಿಯ ನಟೇಶ್ ಕಾರಂತ್, ಗುರು ದೇವದಾಸ ರಾವ್ ಕೂಡ್ಲಿ, ಹಾಗೂ ಸಂಸ್ಥೆಯ ಕಲಾವಿದರನೇಕರು ಉಪಸ್ಥಿತರಿದ್ದರು. ಬಳಿಕ ಕುಂಭಾಶಿ, ತೆಕ್ಕಟ್ಟೆ, ಕೊಮೆ, ಕೋಟ ಪರಿಸರದಲ್ಲಿ ಮನೆಮನೆಗಳಲ್ಲಿ ಹೂವಿನಕೋಲು ಪ್ರಸ್ತುತಗೊಂಡಿತು.
Subscribe to Updates
Get the latest creative news from FooBar about art, design and business.
Related Posts
Comments are closed.