ಉಡುಪಿ : ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ರಜತ ಸಂಭ್ರಮದ ವಿದ್ಯಾದಶಮಿ ಸಂಗೀತೋತ್ಸವವನ್ನು ದಿನಾಂಕ 12 ಅಕ್ಟೋಬರ್ 2024ರಂದು ಬೆಳಿಗ್ಗೆ 8-00 ಗಂಟೆಯಿಂದ ಕುಕ್ಕುದಕಟ್ಟೆಯಲ್ಲಿರುವ ಸರಿಗಮ ಭಾರತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 8-00ಕ್ಕೆ ಮಣಿಪಾಲದ ಹಿಂದುಸ್ತಾನಿ ಗಾಯಕ ಪಂಡಿತ್ ರವಿಕಿರಣ್ ಇವರು ‘ಶ್ರೀ ದುರ್ಗಾ ಮಾತೆ’ಯ ಪ್ರಾರ್ಥನೆಯ ಮೂಲಕ ಉತ್ಸವಕ್ಕೆ ಚಾಲನೆ ನೀಡಲಿದ್ದು, 8.45ರಿಂದ ಪಿಳ್ಳಾರಿ ಗೀತೆಗಳು, 9-00 ಮಾಸ್ಟರ್ ಅಭಿನವ್ ಎಂ. ಭಟ್ ಹಾಗೂ ಕುಮಾರಿ ತನ್ವಿ ಶಾಸ್ತ್ರಿ ಇವರಿಂದ ಹಾಡುಗಾರಿಕೆ ನಡೆಯಲಿದೆ.
ಬೆಳಿಗ್ಗೆ ಗಂಟೆ 9-40ಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಧರ್ಮಸ್ಥಳದ ಶಾಂತಿವನ ಟ್ರಸ್ಟಿನ ಕಾರ್ಯದರ್ಶಿ ಶ್ರೀ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಉಡುಪಿಯ ಹಿರಿಯ ಸಾಹಿತಿ ಪ್ರೊ. ಮುರಲೀಧರ ಉಪಾಧ್ಯ ಹಾಗೂ ಪರ್ಕಳದ ರೊ. ಮಂಜುನಾಥ ಉಪಾಧ್ಯ ಇವರುಗಳು ಭಾಗವಹಿಸುವರು. ಈ ಸಂದರ್ಭದಲ್ಲಿ ಬಹುಮುಖ ಪ್ರತಿಭೆಯ ಕಲಾವಿದೆ ಶ್ರೀಮತಿ ಸುರೇಖಾ ಭಟ್ ಪಟ್ಲ ಇವರನ್ನು ಅಭಿನಂದಿಸಿ ಗೌರವಿಸಲಾಗುವುದು.
ಮುದ್ರಾಡಿ ಶ್ರೀಮತಿ ಮತ್ತು ಶ್ರೀ ಲಕ್ಷ್ಮೀ ನಾರಾಯಣ ಉಪಾಧ್ಯ ಸಂಸ್ಮರಣಾ ಕಚೇರಿಯಲ್ಲಿ ಉಡುಪಿ ಶ್ರೀಮತಿ ಹೇಮಲತಾ ರಾವ್ ಇವರ ಹಾಡುಗಾರಿಕೆಗೆ ವಯೊಲಿನ್ ನಲ್ಲಿ ಶ್ರೀ ಪ್ರಮಥ್ ಭಾಗವತ್ ಮತ್ತು ಮೃದಂಗದಲ್ಲಿ ಶ್ರೀ ಶಾಶ್ವತ್ ಕೆ. ಭಟ್ ಇವರುಗಳು ಸಾಥ್ ನೀಡಲಿದ್ದಾರೆ.
ಬದನಾಜೆ ವಿದುಷಿ ಪಾರ್ವತಿ ಅಮ್ಮ ಸಂಸ್ಮರಣಾ ಕಾರ್ಯಕ್ರಮದಲ್ಲಿ ಸ್ವಸ್ತಿ ಎಂ. ಭಟ್, ಅನುಶ್ರೀ, ರೋಶ್ನಿ ಕೆ. ಶೆಟ್ಟಿ, ಕಶಿಕ ಎನ್. ಶೆಟ್ಟಿ, ಮನ್ವಿ ಭಟ್, ತೀಕ್ಷಣ್ ಎಸ್. ಶೆಟ್ಟಿ, ಕ್ಷಿತಿಜ್ ಕೆ. ಶರ್ಮ ಹಾಗೂ ಸಾನ್ವಿಕಾ ಇವರ ಸಂಗೀತ ಕೃತಿಗಳ ಪ್ರಸ್ತುತಿಗೆ ವಯೊಲಿನ್ ನಲ್ಲಿ ಪ್ರಮಥ್ ಭಾಗವತ್ ಮತ್ತು ಅನುಶ್ರೀ ಮಳಿ ಹಾಗೂ ಮೃದಂಗದಲ್ಲಿ ಶಾಶ್ವತ್ ಕೆ. ಭಟ್ ಮತ್ತು ಶ್ರೀವರ್ಚಸ್ ಇವರು ಸಹಕರಿಸಲಿದ್ದಾರೆ.
ಕಲಾವಿಹಾರಿ ಎ. ಈಶ್ವರಯ್ಯ ಸಂಸ್ಮರಣಾ ಕಛೇರಿಯಲ್ಲಿ ಬೆಂಗಳೂರಿನ ಶ್ರೀಮತಿ ಉಷಾ ರಾಮಕೃಷ್ಣ ಭಟ್ ಇವರ ಹಾಡುಗಾರಿಕೆಗೆ ಬೆಂಗಳೂರಿನ ಕೇಶವ ಮೋಹನ್ ಕುಮಾರ್ ಇವರು ವಯೊಲಿನ್ ಮತ್ತು ಸುನಾದಕೃಷ್ಣ ಅಮೈ ಮೃದಂಗದಲ್ಲಿ ಸಾಥ್ ನೀಡಲಿದ್ದು, ಗಂಟೆ 3-45ರಿಂದ ಎಲ್ಲಾ ಕಲಾವಿದರಿಂದ ‘ಶ್ರೀ ತ್ಯಾಗರಾಜರ ಪಂಚರತ್ನ ಗೋಷ್ಠಿ ಗಾಯನ’ ಹಾಗೂ ‘ನವಾವರಣ ಕೃತಿ’ಗಳ ಪ್ರಸ್ತುತಿ ನಡೆಯಲಿದೆ.
ವೀಣಾ ವಿದುಷಿ ಲಕ್ಷ್ಮೀ ಅಯ್ಯಂಗಾರ್ ಮಣಿಪಾಲ ಇವರ ಸಂಸ್ಮರಣಾ ಕಛೇರಿಯಲ್ಲಿ 5-00 ಗಂಟೆಗೆ ಮಣಿಪಾಲ ಕುಮಾರಿ ದಿವ್ಯಶ್ರೀ ಭಟ್ ಇವರ ಹಾಡುಗಾರಿಕೆಗೆ ವಯೊಲಿನ್ ನಲ್ಲಿ ಮೈಸೂರಿನ ಕುಮಾರಿ ಪೃಥ್ವಿ ಭಾಸ್ಕರ್, ಮೃದಂಗದಲ್ಲಿ ನಿಕ್ಷಿತ್ ಟಿ ಪುತ್ತೂರು, 7-00ರಿಂದ ಉಡುಪಿಯ ಕುಮಾರಿ ಮಾನಸ ಹಾಗೂ ಮಂಗಳೂರಿನ ‘ನೃತ್ಯಾಂಗನ್’ ದ ನಿರ್ದೇಶಕಿ ವಿದುಷಿ ಶ್ರೀಮತಿ ರಾಧಿಕಾ ಶೆಟ್ಟಿ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ ಎಂದು ನಿರ್ದೇಶಕಿ ಉಮಾಶಂಕರಿ ತಿಳಿಸಿರುತ್ತಾರೆ. 9964140601