7 ಮಾರ್ಚ್ 2023, ಮಂಗಳೂರು: ‘ಪುಣ್ಯ ಕ್ಷೇತ್ರದಲ್ಲಿ ಸಾಹಿತ್ಯ ಸೇವೆ ಅಭಿನಂದನೀಯ’ – ಲೀಲಾಕ್ಷ ಕರ್ಕೇರ
‘ಬ್ರಹ್ಮ ಬೈದ್ಯರ್ಕಳ ಗರಡಿ ಕ್ಷೇತ್ರವು 150 ವರ್ಷಗಳ ತುಂಬಿದ ಸಂದರ್ಭದಲ್ಲಿ ಸಾಹಿತ್ಯ ಕಾರ್ಯಕ್ರಮ ಜೋಡಿಸಲು ಅವಕಾಶ ಸಿಕ್ಕಿರುವುದು ಚುಟುಕು ಸಾಹಿತ್ಯ ಪರಿಷತ್ತಿನ ಭಾಗ್ಯ. ಪುಣ್ಯ ಕ್ಷೇತ್ರದಲ್ಲಿ ಸಾಹಿತ್ಯ ಸೇವೆ ಅಭಿನಂದನೀಯ ಕಾರ್ಯ. ನಿರಂತರ ಚಟುವಟಿಕೆಯ ಪರಿಷತ್ತಿಗೆ ಉಜ್ವಲ ಭವಿಷ್ಯವಿದೆ’ ಎಂದು ನಮ್ಮ ಕುಡ್ಲ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಲೀಲಾಕ್ಷ ಕರ್ಕೇರ ಹೇಳಿದರು.
ಅವರು 06-03-2023 ಸೋಮವಾರ ಕಂಕನಾಡಿ ಶ್ರೀ ಕ್ಷೇತ್ರ ಬ್ರಹ್ಮ ಬೈದ್ಯರ್ಕಳ ಗರಡಿಗೆ 150 ವರ್ಷಗಳು ತುಂಬಿದ ಪ್ರಯುಕ್ತ ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ‘ಚುಟುಕಿನೈಸಿರಿ’ ಕವಿ ಸಮ್ಮಿಲನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಇರಾ ನೇಮು ಪೂಜಾರಿ ವಹಿಸಿದ್ದರು. ಹಿರಿಯ ಪತ್ರಕರ್ತ ಗಣೇಶ್ ಪ್ರಸಾದ್ ಪಾಂಡೇಲು, ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಜಯಾನಂದ ಅಂಚನ್, ಕಾಸರಗೋಡು ಜಿಲ್ಲಾ ಚು.ಸಾ.ಪ. ಅಧ್ಯಕ್ಷ ಶಿವರಾಮ ಕಾಸರಗೋಡು, ಸತ್ಯ ಶಾಂತ ಪ್ರತಿಷ್ಠಾನದ ಅಧ್ಯಕ್ಷೆ ಶಾಂತಾ ಕುಂಟಿನಿ, ಕಂಕನಾಡಿ ಬ್ರಹ್ಮ ಬೈದ್ಯರ್ಕಳ ಗರೋಡಿ ಕ್ಷೇತ್ರದ ಮೊಕ್ತೇಸರ ಜೆ. ದಿನೇಶ್ ಅಂಚನ್, ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಸುಮಕರ ಕುಂಪಲ, ಶ್ರೀ ಗೋಕರ್ಣ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಬಿಲ್ಲವ ಮಹಾ ಮಂಡಲದ ಉಪಾಧ್ಯಕ್ಷ ಸೂರ್ಯಕಾಂತ್ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಳಿಕ ನಡೆದ ಕವಿಗೋಷ್ಠಿ ‘ಚುಟುಕಿನೈಸಿರಿ’ ಅಧ್ಯಕ್ಷತೆಯನ್ನು ಕವಿ ರೇಮಂಡ್ ಡಿಕುನಾ ಉದ್ಘಾಟಿಸಿದರೆ, ಹಿರಿಯ ಸಾಹಿತಿ ಮುದ್ದು ಮೂಡುಬೆಳ್ಳೆ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಚು.ಸಾ.ಪ. ಅಧ್ಯಕ್ಷ ಆನಂದ ರೈ ಅಡ್ಕಸ್ಥಳ ಮತ್ತು ಹಿರಿಯ ಕವಿ ಡಾ. ಸುರೇಶ್ ನೆಗಳಗುಳಿ ಮುಖ್ಯ ಅತಿಥಿಗಳಾಗಿದ್ದರು. ಇದೇ ಸಂದರ್ಭದಲ್ಲಿ ಯೋಗಗುರು ಡಾ. ಜಗದೀಶ್ ಶೆಟ್ಟಿ, ಸಾಹಿತಿ ಮುದ್ದು ಮೂಡುಬೆಳ್ಳೆ, ಚಿತ್ರ ಕಲಾವಿದ ಉಮೇಶ್ ಬೆಳ್ಳೂರು ಮತ್ತು ಐ.ಆರ್.ಡಿ.ಓ. ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಪ್ರಫುಲ್ಲ ಗಣೇಶ್ ಇವರೆಲ್ಲರನ್ನು ಸನ್ಮಾನಿಸಿ ಗೌರವಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಸ್ವಾಗತಿಸಿ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ. ಕೃಷ್ಣದಾಸ್ ವಂದಿಸಿದರು. ಲತೀಶ್ ಸಂಕೊಳಿಗೆ, ವ.ಉಮೇಶ್ ಕಾರಂತ್, ಅರ್ಚನಾ ಎಂ. ಕುಂಪಲ ನಿರೂಪಿಸಿದರು.
ಕವಿಗೋಷ್ಠಿಯಲ್ಲಿ ಎಂ.ಎಸ್. ವೆಂಕಟೇಶ ಗಟ್ಟಿ, ಎಡ್ವರ್ಡ್ ಲೋಬೋ ತೊಕೊಟ್ಟು, ಶ್ರೀಮತಿ ಶಶಿಕಲಾ ಕುಂಬ್ಳೆ, ರೇಖಾ ಸುದೇಶ್ ರಾವ್, ಗೀತಾ ಲಕ್ಷ್ಮೀಶ್, ವ. ಉಮೇಶ ಕಾರಂತ, ಜಯರಾಮ ಪಡ್ರೆ, ವಿಂದ್ಯಾ ಎಸ್. ರೈ, ಸತೀಶ್ ಬಿಳಿಯೂರು, ರಶ್ಮಿತಾ ಸುರೇಶ್, ಮೈತ್ರಿ ಎಸ್. ಭಟ್ ವಿಟ್ಲ, ಪ್ರೇಮಾ ಉದಯ ಮುಲ್ಕಿ, ರಶ್ಮಿ ಸನಿಲ್, ಚಂದ್ರಿಕಾ ಕೈರಂಗಳ, ಮನ್ಸೂರು ಮುಲ್ಕಿ, ಭಾಸ್ಕರ್ ವರ್ಕಾಡಿ, ಕಾಂಚನ ಕೋಟೆಕಾರು, ಸೌಮ್ಯ ಗೋಪಾಲ್, ಪರಿಮಳ ಮಹೇಶ್, ಗೋಪಾಲಕೃಷ್ಣ ಶಾಸ್ತ್ರಿ, ದಿನಮಣಿ ರಾವ್, ಶಶಿಕಲಾ ಭಾಸ್ಕರ್ ಬಾಕ್ರಬೈಲು, ಅರ್ಚನಾ ಎಂ. ಬಂಗೇರಾ ಕುಂಪಲ, ಲತೀಶ್ ಸಂಕೊಳಿಗೆ ಮೊದಲಾದವರು ಭಾಗವಹಿಸಿದರು.