ಪುತ್ತೂರು : ಕುಂಜೂರು ಪಂಜ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ನವರಾತ್ರಿ ಉತ್ಸವ ಚಂಡಿಕಾಯಾಗ, ಸಪ್ತಶತಿ ಪಾರಾಯಣ, ರಂಗ ಪೂಜೆ ಹಾಗೂ ಲಲಿತಕಲಾ ಸೇವೆಯ ಅಂಗವಾಗಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ‘ವಿಂಶತಿ ಸಂಭ್ರಮ’ದ ಸರಣಿ ತಾಳಮದ್ದಳೆ ಎಂಟನೆಯ ಕೂಟವು ದಿನಾಂಕ 07 ಅಕ್ಟೋಬರ್ 2024ರಂದು ‘ಗರುಡ ಗರ್ವಭಂಗ’ ಎಂಬ ಆಖ್ಯಾನದೊಂದಿಗೆ ಶ್ರೀ ದೇವಳದಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಜಯಪ್ರಕಾಶ್ ನಾಕೂರು, ಚೆಂಡೆ ಮದ್ದಲೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಮುರಳೀಧರ ಕಲ್ಲುರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ.ಸಿ. ಅಡಿಗ (ಹನೂಮಂತ), ಜಯಂತಿ ಹೆಬ್ಬಾರ್ (ಶ್ರೀ ಕೃಷ್ಣ), ಶುಭಾ ಗಣೇಶ್ (ಬಲರಾಮ), ಕಿಶೋರಿ ದುಗ್ಗಪ್ಪ ನಡುಗಲ್ಲು (ಗರುಡ), ಮನೋರಮಾ ಜಿ. ಭಟ್ (ನಾರದ) ಮತ್ತು ಶಾರದಾ ಅರಸ್ (ವನಚರ) ಸಹಕರಿಸಿದರು. ಪ್ರದೀಪ್ ಬಂಗಾರಡ್ಕ, ದೇವಳದ ಕಾರ್ಯನಿರ್ವಹಣಾಧಿಕಾರಿ ಸುಲೋಚನಾ ವಿ.ಕೆ., ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಹಾಗೂ ಕಲಾವಿದರನ್ನು ಶ್ರೀದೇವರ ಪ್ರಸಾದವನ್ನಿತ್ತು ಗೌರವಿಸಿದರು. ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ದೇವಳದ ಆಡಳಿತ ಮಂಡಳಿ ಸದಸ್ಯರು ಸಹಕರಿಸಿದರು.