ಪುತ್ತೂರು : ಕಳೆದ 35 ವರ್ಷಗಳಿಂದ ಉಪನ್ಯಾಸಕಿಯಾಗಿ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಶ್ರೀಮತಿ ಉಷಾ ಕೆ. ಇವರು ನಿರಂತರವಾಗಿ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದ ವೈಚಾರಿಕ – ಮಾನವೀಯ ಮೌಲ್ಯಗಳ್ಳ ಲೇಖನಗಳ ಸಂಗ್ರಹ ‘ತೆರೆದ ಗವಾಕ್ಷಿ’ ಕೃತಿಯು ದಿನಾಂಕ 12 ಅಕ್ಟೋಬರ್ 2024 ಶನಿವಾರ ಸಂಜೆ 4-30 ಗಂಟೆಗೆ ಪುತ್ತೂರಿನ ಅನುರಾಗ ವಠಾರದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಶ್ರೀಮತಿ ಉಷಾ ಕೆ. ಇವರು ಸುಳ್ಯದ ಸರಕಾರಿ ಜೂನಿಯರ್ ಕಾಲೇಜು ಹಾಗೂ ಕಬಕದ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಕೋಡಿಂಬಾಡಿಯಲ್ಲಿ ವಾಸವಿರುವ ಇವರು ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಹಾಗೂ ಹಿಂದಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ವಿಷ್ಣು ಭಟ್ ಪತ್ನಿಯಾಗಿದ್ದಾರೆ.
ಈ ಕೃತಿಯನ್ನು ಪುತ್ತೂರಿನ ರಾಜೇಶ್ ಪವರ್ ಪ್ರೆಸ್ ಇದರ ಮಾಲಕರಾದ ಶ್ರೀ ರಘುನಾಥ ರಾವ್ ಇವರು ಲೋಕಾರ್ಪಣೆಗೊಳಿಸಲಿದ್ದಾರೆ. ಹಿರಿಯ ಸಾಹಿತಿಗಳಾದ ನಾರಾಯಣ ರೈ ಕುಕ್ಕುವಳ್ಳಿ ಇವರು ಕೃತಿ ಕುರಿತು, ಸಾರಸ್ವತ ಸೌರಭದ ವ್ಯವಸ್ಥಾಪಕ ಸಂಪಾದಕರಾದ ಶ್ರೀ ಸುಳ್ಳಿ ರಾಧಾಕೃಷ್ಣ ನಾಯಕ್ ಇವರು ಕೃತಿಕಾರರ ಕುರಿತು ಮಾತನಾಡಲಿದ್ದಾರೆ. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ನಾಯಕ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ವತಿಯಿಂದ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಉಪನ್ಯಾಸಕಿ ಶ್ರೀಮತಿ ಉಷಾ ಕೆ. ಇವರ ಶಿಷ್ಯ ವರ್ಗ ಹಾಗೂ ಅಭಿಮಾನಿ ವರ್ಗ, ಬಂಧುಗಳಿಗೆ,ಇಷ್ಟಮಿತ್ರರಿಗೆ ಹಾಗೂ ಸಾಹಿತ್ಯ ಪ್ರೇಮಿಗಳಿಗೆ ಗೌರಪೂರ್ವಕ ಸ್ವಾಗತ.