ಮಂಗಳೂರು : ಮಂಗಳೂರು ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ಸಭೆಯು ದಿನಾಂಕ 5 ಅಕ್ಟೋಬರ್ 2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಮ್ಮೇಳನದ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದ ಅಖಿಲ ಭಾರತ ಕೊಂಕಣಿ ಪರಿಷತ್ತಿನ ಕಾರ್ಯಧ್ಯಕ್ಷ ಚೇತನ್ ಆಚಾರ್ಯ ಇವರು ಮಾತನಾಡಿ “ಕೊಂಕಣಿ ಮಾತೃ ಭಾಷೆಯ ಜನರು ಕರ್ನಾಟಕ, ಗೋವಾ, ಕೇರಳ ಮಹಾರಾಷ್ಟ್ರ ರಾಜ್ಯದ ವಿವಿಧೆಡೆ ಇದ್ದು, ಇವರನ್ನು ದಿನಾಂಕ 26 ಅಕ್ಟೋಬರ್ 2024 ಮತ್ತು 27 ಅಕ್ಟೋಬರ್ 2024ರಂದು ಗೋವಾದ ಮಡ್ಗಾಂವ್ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ‘ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನ’ದಲ್ಲಿ ಒಟ್ಟು ಸೇರಿಸಲಿದೆ” ಎಂದು ಹೇಳಿದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಪ್ರಶಾಂತ್ ನಾಯಕ್ ಮಾತನಾಡಿ, “ಪ್ರದೇಶದ ಪ್ರಭಾವ ಭಾಷೆಯ ಮೇಲೆ ಇದ್ದರೂ ಮಾತೃ ಭಾಷೆ ಹೃದಯದಿಂದ ಅರ್ಥವನ್ನು ಮಾಡಿಸುತ್ತದೆ” ಎಂದರು. ಹಿರಿಯ ಕೊಂಕಣಿ ಕಾರ್ಯಕರ್ತೆ ಗೀತಾ ಕಿಣಿ ಅವರು ಮೊದಲ ನೋಂದಣಿ ಮಾಡಿ ದರು. ಕೆ.ಬಿ.ಎಂ.ಕೆ. ಅಧ್ಯಕ್ಷ ಕೆ. ವಸಂತ ರಾವ್ ಸ್ವಾಗತಿಸಿ, ಕಾರ್ಯದರ್ಶಿ ರೇಮಂಡ್ ಡಿಕುನ್ಹಾ ತಾಕೊಡೆ ವಂದಿಸಿದರು. ಖಜಾಂಚಿ ಸುರೇಶ ಶೆಣೈ ಉಪಸ್ಥಿತರಿದ್ದರು.