ಪುತ್ತೂರು : ಕಳೆದ 35 ವರ್ಷಗಳಿಂದ ಉಪನ್ಯಾಸಕಿಯಾಗಿ ಸುದೀರ್ಘ ಸೇವೆಯನ್ನು ಸಲ್ಲಿಸಿ, ನಿವೃತ್ತರಾದ ಶ್ರೀಮತಿ ಉಷಾ ಕೆ.ಯವರು ನಿರಂತರವಾಗಿ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದ ವೈಚಾರಿಕ – ಮಾನವೀಯ ಮೌಲ್ಯಗಳುಳ್ಳ ಲೇಖನಗಳ ಸಂಗ್ರಹ ‘ತೆರೆದ ಗವಾಕ್ಷಿ’ ಕೃತಿ ದಿನಾಂಕ 12 ಅಕ್ಟೋಬರ್ 2024ರಂದು ಪುತ್ತೂರಿನ ಅನುರಾಗ ವಠಾರದಲ್ಲಿ ರಾಜೇಶ್ ಪವರ್ ಪ್ರೆಸ್ ಇದರ ಮಾಲಕರಾದ ಶ್ರೀ ರಘುನಾಥ ರಾವ್ ಇವರು ಲೋಕಾರ್ಪಣೆಗೊಳಿಸಿದರು.
ಹಿರಿಯ ಸಾಹಿತಿಗಳಾದ ನಾರಾಯಣ ರೈ ಕುಕ್ಕುವಳ್ಳಿಯವರು ಕೃತಿ ಕುರಿತು ಹಾಗೂ ಸಾರಸ್ವತ ಸೌರಭದ ವ್ಯವಸ್ಥಾಪಕ ಸಂಪಾದಕರಾದ ಸುಳ್ಳಿ ರಾಧಾಕೃಷ್ಣ ನಾಯಕ್ ಅವರು ಕೃತಿಕಾರರ ಕುರಿತು ಮಾತನಾಡಿದರು. ಹಿರಿಯ ಸಾಹಿತಿಗಳಾದ ಶ್ರೀ ವಿ.ಬಿ. ಆರ್ತಿಕಜೆ, ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಬಿ. ಪುರಂದರ ಭಟ್, ಪತ್ರಕರ್ತರಾದ ಶ್ರೀ ಜಯಾನಂದ ಪೆರಾಜೆ ಇನ್ನಿತರರು ಉಪಸ್ಥಿತರಿದ್ದರು.