ಹಾಸನ : ಪ್ರತಿವರ್ಷವೂ ಕೊಡಮಾಡುವಂತೆ ಪ್ರಸಕ್ತ ಸಾಲಿನಲ್ಲಿಯೂ 2024ನೇ ಸಾಲಿನ ಮಾಣಿಕ್ಯ ಪ್ರಕಾಶನದ ಪ್ರಶಸ್ತಿಗಳಿಗೆ ವಿವಿಧ ಕ್ಷೇತ್ರದ ರಾಜ್ಯ ಹಾಗೂ ಹೊರರಾಜ್ಯದ ವಿವಿಧ ಸಾಧಕರನ್ನು ಗುರುತಿಸಲಾಗಿದೆ. ಹಿರಿಯ ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್, ನಾಗರಾಜ್ ಹೆತ್ತೂರು, ನಾಗರಾಜ್ ದೊಡ್ಡಮನಿ, ಡಾ. ಎಚ್.ಕೆ. ಹಸೀನಾ ಹಾಗೂ ವಾಸು ಸಮುದ್ರವಳ್ಳಿ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಈ ಕೆಳಕಂಡಂತೆ ಸಾಧಕರನ್ನು ಗುರುತಿಸಿದೆ. ದಿನಾಂಕ 10 ನವೆಂಬರ್ 2024ರಂದು ಹಾಸನದ ಸಂಸ್ಕೃತ ಭವನದಲ್ಲಿ ಹಮ್ಮಿಕೊಂಡಿರುವ ಪ್ರಕಾಶನದ ರಾಜ್ಯ ಮಟ್ಟದ ಒಂಭತ್ತನೇ ಕವಿಕಾವ್ಯ ಸಂಭ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಾಶಕಿ ದೀಪಾ ಉಪ್ಪಾರ್ ತಿಳಿಸಿದ್ದಾರೆ.
ರಾಜ್ಯ ಮಟ್ಟದ ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿ 2024 :
ಯು.ಎಸ್. ಬಸವರಾಜು ಹಾಸನ (ಶರಣ ತತ್ತ್ವ ಪ್ರಸಾರ), ಪೂಜಾ ರಂಘುನಂದನ್ ಹಾಸನ (ರಂಗಭೂಮಿ), ಶ್ರೀನಿವಾಸ ಪಿ.ಎ. ಹಾಸನ, (ಮಾಧ್ಯಮ), ಗ್ಯಾರಂಟಿ ರಾಮಣ್ಣ ಹಾಸನ (ಜಾನಪದ), ನಲ್ಲಪ್ಪ ಹಾಸನ (ಪೌರಕಾರ್ಮಿಕ ಸೇವೆ).
ರಾಜ್ಯ ಮಟ್ಟದ ಜನ್ನ ಕಾವ್ಯ ಪ್ರಶಸ್ತಿ 2024 :
ಕೃಷ್ಣ ಪದಕಿ ಶಿರಸಿ (ಉತ್ತರ ಕನ್ನಡ), ಎಚ್.ಎಸ್. ಬಸವರಾಜ್ (ಹಾಸನ), ಲಕ್ಷ್ಮಿ ಸಿ.ಎಚ್. (ಬೆಂಗಳೂರು), ರಶ್ಮಿ ಚಂಗಚಂಡ (ಕೊಡಗು), ಟಿ. ತ್ಯಾಗರಾಜು (ಮೈಸೂರು)
ರಾಜ್ಯ ಮಟ್ಟದ ಹೊಯ್ಸಳ ಸಾಹಿತ್ಯ ಪ್ರಶಸ್ತಿ 2024 :
ಡಾ. ಪಿ. ದಿವಾಕರ ನಾರಾಯಣ (ವಿಜಯನಗರ), ಪ್ರಕಾಶ್ ಎನ್. ಜಿಂಗಾಡೆ (ಬೆಂಗಳೂರು), ನಂದಿನಿ ಶಿ.ರ. ಕೋಣನೂರು (ಮೈಸೂರು), ವೈ.ಬಿ. ಕಾಂತರಾಜು (ಸಾಲುಮರದ ಪೊಲೀಸ್) ಹಾಸನ, ಎಚ್. ಸುಂದರಮ್ಮ ಕಡೂರು (ಚಿಕ್ಕಮಗಳೂರು)