ಮಂಗಳೂರು : ಚಿತ್ರಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಂಗಳೂರಿನ ಬ್ಲ್ಯಾಕ್ ಅಂಡ್ ಬ್ಲೂ ಈವೆಂಟ್ ಸಂಸ್ಥೆ ಪುಟಾಣಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ದಿನಾಂಕ 2 ಅಕ್ಟೋಬರ್ 2024ರಂದು ನಗರದ ಉರ್ವಾಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಆಯೋಜಿಸಿತು. ಚಿತ್ರಕಲಾ ಸ್ಪರ್ಧೆಯನ್ನು ಎರಡು ವಿಭಾಗಗಳಲ್ಲಿ ನಡೆಸಲಾಗಿದೆ. 1ನೇ ತರಗತಿಯಿಂದ 3ನೇ ತರಗತಿಯವರೆಗೆ ಹಾಗೂ 4ನೇ ತರಗತಿಯಿಂದ 7ನೇ ತರಗತಿಯವರೆಗಿನ ಮಕ್ಕಳಿಗೆ ಈ ಸ್ಪರ್ಧೆ ಏರ್ಪಡಿಸಲಾಗಿತ್ತು.
ಮೊದಲ ವಿಭಾಗದಲ್ಲಿ ‘ಭಾರತೀಯ ಹಬ್ಬ’ ಸ್ಪರ್ಧೆಯ ವಿಷಯವಾಗಿತ್ತು. ಈ ವಿಭಾಗದಲ್ಲಿ ವಿಜೇತರ ಪೈಕಿ ಅಹಾನ್ – ಪ್ರಥಮ, ಶಾನ್ವಿ- ದ್ವಿತೀಯ ಹಾಗೂ ಆದಿತ್ಯ ತಂತ್ರಿ – ತೃತೀಯ ಸ್ಥಾನ ಪಡೆದರು. ಎರಡನೇ ವಿಭಾಗದಲ್ಲಿ ‘ಕಡಲ ಕಿನಾರೆ’ ಸ್ಪರ್ಧೆಯ ವಿಷಯವಾಗಿತ್ತು. ಈ ವಿಭಾಗದಲ್ಲಿ ಹನ್ಸಿಕಾ – ಪ್ರಥಮ, ಸಚಿ ಕೆ. – ದ್ವಿತೀಯ, ಮನ್ವಿತ್ ಕೆ.ಎಲ್. – ತೃತೀಯ ಸ್ಥಾನ ಪಡೆದರು.
ಈ ಚಿತ್ರಕಲಾ ಸ್ಪರ್ಧೆಯಲ್ಲಿ ಚಿತ್ರ ಕಲಾವಿದ ಅನುದೀಪ್ ಕರ್ಕೇರ ಮತ್ತು ಸಂತ ಅಲೋಶಿಯಸ್ ಹೈಸ್ಕೂಲಿನ ಚಿತ್ರಕಲಾ ಶಿಕ್ಷಕ ಜೋನ್ ಚಂದ್ರನ್ ತೀರ್ಪುಗಾರರಾಗಿ ಸಹಕರಿಸಿದರು. ಡ್ರೀಮ್ ಡೀಲ್ ಗ್ರೂಪ್ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಅಭಿಜಿತ್ ದಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಚಿತ್ರಕಲಾ ಸ್ಪರ್ಧೆಯನ್ನು ಬ್ಲ್ಯಾಕ್ ಅಂಡ್ ಬ್ಲೂ ಈವೆಂಟ್ ಸಂಸ್ಥೆಯ ಪವನ್ ಎಂ.ವಿ, ಮತ್ತು ರಾಹುಲ್ ಎಸ್. ಸಂಯೋಜಿಸಿದ್ದರು.