ಮಂಗಳೂರು : ಉರ್ವದಲ್ಲಿರುವ ನಾಟ್ಯಾರಾಧನಾ ಕಲಾ ಕೇಂದ್ರ (ರಿ.) ಇದರ ತ್ರಿಂಶೋತ್ಸವ ಸಂಭ್ರಮದ ಅಂಗವಾಗಿ ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ನಾಟ್ಯಾರಾಧನಾ ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿ ಇದರ ಸಹಯೋಗದೊಂದಿಗೆ ಅರ್ಪಿಸುವ ಸರಣಿ ನೃತ್ಯ ಕಾರ್ಯಕ್ರಮ ‘ನೃತ್ಯಾಮೃತ -10’ದಲ್ಲಿ ‘ಭಾವ ನವನವೀನ’ ದಿನಾಂಕ 19-10-2024ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ. ಅಡಿಟೋರಿಯಂನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಬೋಳೂರು ದ್ರಾವಿಡ ಸಮಾಜೋದ್ಧಾರಕ ಸಂಘದ ಅಧ್ಯಕ್ಷರಾದ ಶ್ರೀ ಬಿ. ಸುಮಂತ ಕುಮಾರ್ ಇವರು ಉದ್ಘಾಟಿಸಲಿದ್ದು, ಮಾಜಿ ಶಾಸಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. 5-50 ಗಂಟೆಗೆ ನಡೆಯಲಿರುವ ಮೇಳ ಪ್ರಾಪ್ತಿಗೆ ನಟುವಾಂಗ ಮತ್ತು ನೃತ್ಯ ನಿರ್ದೇಶನ ಗುರು ಸುಮಂಗಲಾ ರತ್ನಾಕರ್ ರಾವ್ ಹಾಗೂ ಹಾಡುಗಾರಿಕೆ ವಿದ್ವಾನ್ ರೋಹಿತ್ ಭಟ್ ಉಪ್ಪೂರ್. ಇವರಿಗೆ ಬೆಂಗಳೂರಿನ ವಿದ್ವಾನ್ ಕಾರ್ತಿಕ್ ವೈಧಾತ್ರಿ ಮೃದಂಗ ಮತ್ತು ವಿದ್ವಾನ್ ರಾಕೇಶ್ ದತ್ತ್ ಕೊಳಲಿನಲ್ಲಿ ಸಹಕರಿಸಲಿರುವರು. ಬಳಿಕ ವಿದುಷಿ ಸುಮಂಗಲಾ ರತ್ನಾಕರ್ ರಾವ್, ವಿದುಷಿ ಅನು ಧೀರಜ್, ವೃಂದ ರಾವ್, ಕುಮಾರಿ ಧರಿತ್ರಿ ಭಿಡೆ ಹಾಗೂ ಶ್ರೀ ಅನಂತಕೃಷ್ಣ ಸಿ.ವಿ. ಇವರುಗಳು ನೃತ್ಯ ಪ್ರಸ್ತುತಿ ನೀಡಲಿರುವರು.