08 ಮಾರ್ಚ್ 2023, ಮಂಗಳೂರು: “ಸಾಧನೆಗೆ ಯಾವುದೇ ನ್ಯೂನತೆಯು ಅಡ್ಡಿಯಲ್ಲ” ಎಂಬಂತೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇಲ್ಲಿಯ ಚಿತ್ರಕಲಾ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿನಿಯಾದ ಕು. ಸುಧಾರತ್ನ ಕೆ.ಎಸ್. ಇವರು ತಮ್ಮ ದೈಹಿಕ ಅಸಾಮರ್ಥ್ಯ (ಕೈ ಕಾಲುಗಳ ನ್ಯೂನತೆ, ನರಗಳ ದೌರ್ಬಲ್ಯ)ದ ನಡುವೆಯೂ ಜೇನ್ ಪರಿಶ್ರಮ. ಆತ್ಮ ವಿಶ್ವಾಸ, ಸಹೃದಯಿಗಳ ಪ್ರೋತ್ಸಾಹದಿಂದ ಪ್ರಬುದ್ಧ ಕಲಾವಿದೆಯಾಗಿ ರಾಜ್ಯ ಸರಕಾರದ ಪುರಸ್ಕರಕ್ಕೆ ಭಾಜನರಾಗಿದ್ದಾರೆ.
ಮಂಗಳೂರಿನ ನೆಕ್ಕಿಲ ಗುಡ್ಡೆಯ ಶ್ರೀ ಶಂಕರ ನಾರಾಯಣ ಭಟ್ ಕೆ. ಹಾಗೂ ಶ್ರೀಮತಿ ಶಂಕರಿ ಈ ದಂಪತಿಗಳ ಸುಪುತ್ರಿಯಾಗಿರುವ ಈಕೆ ಹೆತ್ತವರ ನಿರಂತರ ಪ್ರೋತ್ಸಾಹ ಹಾಗೂ ಶ್ರೀಮತಿ ಶಾಲಿನಿ (ಚಿತ್ರಕಲಾ ಶಿಕ್ಷಕಿ) ಇವರ ಸಹನಾ ತರಬೇತಿ, ಅಣ್ಣನಾದ ರವಿಚಂದ್ರ ಕೆ. ಹಾಗೂ ಮನೆ, ಶಾಲೆಯವರೆಲ್ಲಾ ಸಹಾಯ ಸಹಕಾರ ಪ್ರೋತ್ಸಾಹದಿಂದ ಚಿತ್ರಕಲೆ ಅದರಲ್ಲಿಯೂ ಮುಖ್ಯವಾಗಿ ಜಲವರ್ಣದಲ್ಲಿ ಹೆಚ್ಚು ಪರಿಣತಿಯನ್ನು ಪಡೆದಿದ್ದಾರೆ. ಪೆನ್ಸಿಲ್ ಶೇಡಿಂಗ್, ತೈಲವರ್ಣ, ಫ್ಯಾಬ್ರಿಕ್ ಪೈಂಟಿಂಗ್, ಗ್ಲಾಸ್ ಪೈಂಟಿಂಗ್ ಮುಂತಾದ ಪ್ರಕಾರಗಳಲ್ಲಿಯೂ ಹೆಚ್ಚಿನ ಪರಿಣತಿಯನ್ನು ಪಡೆದುಕೊಂಡಿರುವುದು ಇವರ ಆಸಕ್ತಿಯ ದ್ಯೋತಕವಾಗಿದೆ.
ಬಾಲ್ಯದಿಂದಲೂ ಈ ಮಂಗಳ ಜ್ಯೋತಿ ಸಮಗ್ರ ಶಾಲೆಯಲ್ಲಿ ಇವರು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ನಂತರದ ದಿನಗಳಲ್ಲಿ ಚಿತ್ರಕಲಾ ತರಬೇತಿಯ ಜೊತೆಗೆ ಟೈಪ್ ರೈಟಿಂಗ್, ಕಂಪ್ಯೂಟರ್ ನಲ್ಲಿ ತರಬೇತಿ ಪಡೆಯುತ್ತಾ, ಅದರಲ್ಲೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲೂ ಪ್ರಥಮ ದರ್ಜೆಯನ್ನು ಪಡೆದುಕೊಂಡಿರುವ ಇವರು ಹಾಡುವುದು, ಕವನ ಹಾಗೂ ಲೇಖನ ಬರೆಯುವುದು, ಪದಬಂಧ ರಚಿಸುವುದು ಹಾಗೂ ಬಿಡಿಸುವುದು ಮುಂತಾದ ಹವ್ಯಾಸ ಗಳನ್ನು ಬೆಳೆಸಿಕೊಂಡಿರುತ್ತಾರೆ.
ಬಹುಮಾನಗಳು
ರಾಜ್ಯ ಮಟ್ಟದ “ಅಂಚೆ ಕುಂಚ” ಸ್ಪರ್ಧೆಯಲ್ಲಿ ಬಹುಮಾನ. ಪ್ರಸಾದ್ ಹಾರ್ಟ್ ಗ್ಯಾಲರಿ ಇವರು ನಡೆಸಿದ ಚಿತ್ರಕಲ ಸ್ಪರ್ಧೆಯಲ್ಲಿ ಸತತ 5 ಬಾರಿ ಪ್ರಥಮ ಸ್ಥಾನ. ಜಿಲ್ಲಾ ಮಟ್ಟದ ಕುವೆಂಪು” ಅಂಚೆ ಕುಂಚ” ಸ್ಪರ್ಧೆಯಲ್ಲಿ ಬಹುಮಾನ. ಕಲ್ಕೂರ ಪ್ರತಿಷ್ಠಾನದ ವತಿಯಿಂದ “ಕಾರ್ಡಿನಲ್ಲಿ ಕಾರಂತ” ಸ್ಪರ್ಧೆಯಲ್ಲಿ ಬಹುಮಾನ. ವಿಜಯ ಕರ್ನಾಟಕ ಪತ್ರಿಕೆ ನಡೆಸಿದ “ಗಣೇಶ ಪೇಂಟಿಂಗ್ ಸ್ಪರ್ಧೆಯಲ್ಲಿ” ವಿಶೇಷ ಬಹುಮಾನ.
ಚಿತ್ರಕಲಾ ಪ್ರದರ್ಶನಗಳು:
ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಎಸೊಸಿಯೇಷನ್ ಆಫ್ ಬ್ರಿಟಿಷ್ ಸ್ಕಾಲರ್ (A.B.S).
ಮಂಗಳೂರಿನ ಮೀನುಗಾರಿಕಾ ಕಾಲೇಜು ಇವರ ವತಿಯಿಂದ ಯುನಿವರ್ಸಿಟಿ ಕಾಲೇಜಿನಲ್ಲಿ.
ಕಾಲೇಜ್ ಆಫ್ ಸೋಶಿಯಲ್ ವರ್ಕ್ ವತಿಯಿಂದ ಸಂತ ಎಲೋಷಿಯಸ್ ಕಾಲೇಜಿನಲ್ಲಿ.
ನಿಟ್ಟೆಯ ಜಸ್ಟಿಸ್ ಕೆ ಎಸ್ ಹೆಗ್ಡೆ ಕಾಲೇಜಿನಲ್ಲಿ.
ಮಂಗಳೂರಿನ ರೋಷನಿ ನಿಲಯದಲ್ಲಿ.
ದ.ಕ ಜಿಲ್ಲಾ ನ್ಯಾಯಾಲಯದಲ್ಲಿ.
ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ.
ಉಡುಪಿಯ ಜೆ.ಸಿ ವೀಕ್ ಸಂದರ್ಭದಲ್ಲಿ.
ಇಲ್ ಸಿಟಿ ಜೆಸಿಸ್ ವತಿಯಿಂದ ಉಡುಪಿಯ ನೆಹರು ಮೆಮೋರಿಯಲ್ ಹಾಲ್ ನಲ್ಲಿ ತಮ್ಮ ಚಿತ್ರಕಲಾ ಪ್ರದರ್ಶನಗಳನ್ನು ನೀಡಿದ್ದಾರೆ.
ಪ್ರಶಸ್ತಿಗಳು
ಉಡುಪಿಯ ಇಂಡಿಯನ್ ಜೆಸೀಸ್ ವತಿಯಿಂದ ‘toyi award’.
Daijiworld ಹಲೋ ನಾನು ಪತ್ರಿಕೆಯ ವತಿಯಿಂದ ‘ಸ್ವಾಭಿಮಾನ್ ಮೈನ್ ಅವಾರ್ಡ್.
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ‘ಟ್ಯಾಲೆಂಟ್ ಮಿಲಾದ್’ ಪ್ರಶಸ್ತಿ.
ವಿಶ್ವ ಅಂಗವಿಕಲರ ದಿನಾಚರಣೆಯಂದು ಕರ್ನಾಟಕ ಸರಕಾರದ ವತಿಯಿಂದ ‘ರಾಜ್ಯಪ್ರಶಸ್ತಿ’.
ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಮಂಗಳೂರು ವತಿಯಿಂದ ‘ಅಪ್ರಮೇಯ ಕಲಾ ಸಾಧನ’ ಪ್ರಶಸ್ತಿ.
4 Comments
Sudha akka is always a inspiration to all of us
ರಿಯಲಿ ಗ್ರೇಟ್ ಸುಧಾರತ್ಣ 👌👌👌Hats OFF YOU ಸುಧಾ 😍😍😍😍😍😍
ಸುಧಾರತ್ನ ನೀವು ಕಲಾಲೋಕದ ಅಮೂಲ್ಯರತ್ನ ನಿಮ್ಮನ್ನು ಗುರುತಿಸಿ ಪ್ರಶಸ್ತಿ ನೀಡಿದರೆ ಆ ಪ್ರಶಸ್ತಿ ಸಾರ್ಥಕತೆ ಪಡೆಯುತ್ತದೆ. ದೈಹಿಕ ನ್ಯೂನತೆಗಳ ನಡುವೆಯೂ ನಿಮ್ಮ ಸಾಧನೆ ಅಮೋಘ.. ಅಭಿನಂದನಿಗಳು ಶುಭವಾಗಲಿ
Nice to hear about your achievements, and you are the great inspiration to others.