ಮಂಗಳೂರು : ವಾಲ್ಮೀಕಿ ಜಯಂತಿಯ ಪ್ರಯುಕ್ತ ಬಂಟ್ವಾಳದ ಶ್ರೀ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದಿನಾಂಕ 17 ಅಕ್ಟೋಬರ್ 2024ನೇ ಗುರುವಾರದಂದು ಡಾಕ್ಟರ್ ವಾರಿಜಾ ನೀರ್ಬಯಲು ಮತ್ತು ಶಿಷ್ಯರಿಂದ ‘ಲವಕುಶ ಜನನ ‘ಎಂಬ ಗಮಕ ವಾಚನ ವ್ಯಾಖ್ಯಾನವು ನಡೆಯಿತು. ಕಾರ್ಯಕ್ರಮದಲ್ಲಿ ತಾಲೂಕು ಘಟಕದ ಕಾರ್ಯದರ್ಶಿ ನ್ಯಾಯವಾದಿ ಶ್ರೀ ರವೀಂದ್ರ ಕುಕ್ಕಾಜೆ ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.
ಪುತ್ತೂರಿನಲ್ಲಿ ಗಮಕ
ವಾಲ್ಮೀಕಿ ಜಯಂತಿಯ ಪ್ರಯುಕ್ತ ಮನೆಮನೆ ಗಮಕ ಕಾರ್ಯಕ್ರಮವು ದಿನಾಂಕ 17 ಅಕ್ಟೋಬರ್ 2024ನೇ ಗುರುವಾರದಂದು ಪುತ್ತೂರಿನ ಬಪ್ಪಳಿಗೆಯಲ್ಲಿರುವ ಡಾ. ಸತೀಶ್ ರಾವ್ ಇವರ ‘ಸ್ವರಧೇನು’ ಮನೆಯಲ್ಲಿ ನಡೆಯಿತು. ರಾಮಾಯಣದ ‘ಲವಕುಶ’ ಭಾಗವನ್ನು ಶ್ರೀ ಪ್ರಕಾಶ್ ನಾಕೂರು ವಾಚಿಸಿ, ಶ್ರೀ ಈಶ್ವರ ಭಟ್ ಗುಂಡ್ಯಡ್ಕ ವ್ಯಾಖ್ಯಾನಗೈದರು. ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷ ಪ್ರೊಫೆಸರ್ ವೇದವ್ಯಾಸ ರಾಮಕುಂಜ, ಕಾರ್ಯದರ್ಶಿ ಶ್ರೀಮತಿ ಶಂಕರಿ ಶರ್ಮ, ಶ್ರೀಮತಿ ಶೋಭಿತ ಸತೀಶ್ ರಾವ್ ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.