ಬೆಂಗಳೂರು : ರಂಗಮಂಡಲ ಬೆಂಗಳೂರು ಮತ್ತು ರಂಗಪಯಣ (ರಿ.) ಆಯೋಜಿಸಿರುವ ‘ಕಾವ್ಯ ಸಂಸ್ಕೃತಿ ಯಾನ’ ಕಾರ್ಯಕ್ರಮದ ನಾಲ್ಕನೇ ಕವಿಗೋಷ್ಠಿ ಜನಸಾಮಾನ್ಯರ ದನಿಯಾಗಲಿ ಕಾವ್ಯ ರಾಜಧಾನಿ ಬೆಂಗಳೂರಿನಿಂದ ರೇಷ್ಮೆನಗರಿ ರಾಮನಗರದ ಕಡೆಗೆ ‘ಕಾವ್ಯದೀವಟಿಗೆಯ ಪಯಣ’ವು ದಿನಾಂಕ 26 ಅಕ್ಟೋಬರ್ 2024ರಂದು ಇಳಿ ಮಧ್ಯಾಹ್ನ 3-30 ಗಂಟೆಗೆ ಬೆಂಗಳೂರಿನ ಜಯಚಾಮರಾಜೇಂದ್ರ ರಸ್ತೆ, ಕನ್ನಡ ಭವನ ಕರ್ನಾಟಕ ನಾಟಕ ಅಕಾಡೆಮಿ ಚಾವಡಿಯಲ್ಲಿ ನಡೆಯಲಿದೆ.
ಬೆಂಗಳೂರು ಗೋಷ್ಠಿಯ ಅಧ್ಯಕ್ಷತೆಯನ್ನು ಕ.ಸಾ.ಪ.ದ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಮನ ಬಳಿಗಾರ್ ವಹಿಸಲಿದ್ದು, ಉದ್ಘಾಟಕರಾಗಿ ಹಿರಿಯ ಕವಿಗಳು ಮತ್ತು ಬರಹಗಾರ್ತಿ ಡಾ. ಎಲ್.ಜಿ. ಮೀರಾ ಆಗಮಿಸಲಿದ್ದಾರೆ. ನಾಡಿನ ಖ್ಯಾತ ಕವಿಗಳಿಂದ ‘ಕವಿತಾ ವಾಚನ’ ಮತ್ತು ರಂಗ ಪಯಣ ಹಾಗೂ ಸಾತ್ವಿಕ ನಾಟಕ ಬಳಗದವರು ‘ಪದ ಪಾದ’ ಕಾರ್ಯಕ್ರಮ ನೀಡಲಿದ್ದು, ‘ರಂಗಪಯಣ’ದ ಮಿತ್ರರಾದ ರಾಜಗುರು ಮತ್ತು ನಯನ ಸೂಡ ಇವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.