ವೇಣೂರು : ವೇಣೂರಿನ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘದ ಸದಸ್ಯರಿಂದ ‘ಸುದರ್ಶನ ಚಕ್ರಗ್ರಹಣ’ ಪ್ರಸಂಗದ ಯಕ್ಷಗಾನ ತಾಳಮದ್ದಳೆಯು ದಿನಾಂಕ 19 ಅಕ್ಟೋಬರ್ 2024 ರಂದು ವೇಣೂರಿನ ವಿದ್ಯೋದಯ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಬಲಿಪ ಶಿವಶಂಕರ ಭಟ್, ಚೆಂಡೆ ಮದ್ದಳೆಗಳಲ್ಲಿ ಕೊಂಕಣಾಜೆ ಚಂದ್ರಶೇಖರ ಭಟ್ ಹಾಗೂ ಬೆಳಾಲು ಗಣೇಶ ಭಟ್, ಚಕ್ರತಾಳದಲ್ಲಿ ಇದೇ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿ ಸುಷೇಣ ಇವರು ಸಹಕರಿಸಿದರು. ಶಾಲಾ ವಿದ್ಯಾರ್ಥಿಗಳಾದ ಒಂಬತ್ತನೆಯ ತರಗತಿಯ ರಂಜನಿ ಹಾಗೂ ನಾಲ್ಕನೇ ತರಗತಿಯ ಸುಷೇಣರು ಆಸಕ್ತಿಯಿಂದ ಭಾಗವಹಿಸಿದ್ದು ವಿಶೇಷವಾಗಿತ್ತು.
ಒಂಬತ್ತನೇ ತರಗತಿಯ ಕನ್ನಡ ಪಾಠದಲ್ಲಿ ಇರುವ ಈ ಭಾಗವನ್ನು ನಡೆಸಲು ಶಾಲಾ ಮುಖ್ಯ ಪ್ರಬಂಧಕರಾದ ಕೆ. ಶಿವರಾಮ ಹೆಗ್ಡೆಯವರು ಅವಕಾಶವನ್ನು ನೀಡಿದ್ದು, ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ ಶ್ರೀಮತಿ ಶೀಲಾ ಕೆ. ಎಸ್ ಹೆಗ್ಡೆ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ಯಕ್ಷಗಾನ ಭಾಗವತರಾಗಿದ್ದ ದಿ. ಬಲಿಪ ಪ್ರಸಾದ ಭಟ್ ಇವರ ಸ್ಮರಣೆಯನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಊರಿನ ಪ್ರಮುಖರು ನೆರೆದಿದ್ದರು.
Subscribe to Updates
Get the latest creative news from FooBar about art, design and business.
Related Posts
Comments are closed.