ಕಲಬುರಗಿ : ರಂಗಮಂಡಲ ಬೆಂಗಳೂರು ಮತ್ತು ಜಾನಪದ ಲೋಕ ರಾಮನಗರ ಆಯೋಜಿಸಿರುವ ಮನುಕುಲದ ನೋವಿಗೆ ಮದ್ದಾಗಲಿ ಕವಿತೆಗಳು ಜನಸಾಮಾನ್ಯರ ದನಿಯಾಗಲಿ ಕಾವ್ಯ ‘ಕಾವ್ಯ ಸಂಸ್ಕೃತಿ ಯಾನ’ ಕಾರ್ಯಕ್ರಮದ ನಾಲ್ಕನೇ ಕವಿಗೋಷ್ಠಿಯನ್ನು ದಿನಾಂಕ 27 ಅಕ್ಟೋಬರ್ 2024ರಂದು ಬೆಳಿಗ್ಗೆ 10-00 ಗಂಟೆಗೆ ರೇಷ್ಮೆನಗರಿ ರಾಮನಗರದ ಬೆಂಗಳೂರು ಮೈಸೂರು ಹಳೇ ಹೆದ್ದಾರಿಯಲ್ಲಿರುವ ಜಾನಪದ ಲೋಕದ ಜಾನಪದ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿರಿಯ ಕವಿಗಳು ಮತ್ತು ಕಥೆಗಾರರಾದ ಡಾ. ಬೈರಮಂಗಲ ರಾಮೇಗೌಡ ಇವರು ರಾಮನಗರ ಕಾವ್ಯ ಸಂಸ್ಕೃತಿ ಯಾನದ ಸರ್ವಾಧ್ಯಕ್ಷರಾಗಿದ್ದು, ಹಿರಿಯ ಕವಿ ಮತ್ತು ಕಥೆಗಾರರಾದ ಡಾ. ಕಾಶಿನಾಥ ಅಂಬಲಗೆ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಬೆಳಿಗ್ಗೆ 11-30 ಗಂಟೆಗೆ ಕವಿಗೋಷ್ಠಿ 1 ಹಿರಿಯ ಕವಿಗಳು ಹಾಗೂ ಕಾದಂಬರಿಕಾರರಾದ ಎಂ. ಶಿವನಂಜಯ್ಯ ಹಾಗೂ ಮಧ್ಯಾಹ್ನ 1-30 ಗಂಟೆಗೆ ಕವಿಗೋಷ್ಠಿ 2 ಜಾನಪದ ವಿದ್ವಾಂಸ ಹಾಗೂ ಕವಿಗಳಾದ ಡಾ. ಕುರುವ ಬಸವರಾಜು ಇವರುಗಳ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಂಜೆ 4-00 ಗಂಟೆಗೆ ಸರ್ವಾಧ್ಯಕ್ಷರೊಂದಿಗೆ ಸಂವಾದ, ಚನ್ನಪಟ್ಟಣ ಶಾರದ ನಾಗೇಶ್ ಮತ್ತು ತಂಡ, ಕನಕಪುರ ಜೋಗಿಲ ಸಿದ್ಧರಾಜು ಮತ್ತು ತಂಡ, ಚಾಮರಾಜನಗರ ಸಿ.ಎಂ. ನರಸಿಂಹಮೂರ್ತಿ ಮತ್ತು ತಂಡ, ರಾಮನಗರ ದೇವರಾಜು, ವಿನಯಕುಮಾರ್ ಹಾಗೂ ಚೌ.ಪು. ಸ್ವಾಮಿ ಇವರಿಂದ ‘ಪದ-ಪಾದ’ ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ.