ಕಾರ್ಕಳ : ಯಕ್ಷರಂಗಾಯಣ ಕಾರ್ಕಳ ಇದರ ವತಿಯಿಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ‘ತಿಂಗಳ ನಾಟಕ’ ಪ್ರದರ್ಶನವನ್ನು ದಿನಾಂಕ 30 ಅಕ್ಟೋಬರ್ 2024ರಂದು ಸಂಜೆ 6-00 ಗಂಟೆಗೆ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕೆ.ಪಿ. ಲಕ್ಷ್ಮಣ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮಂಗಳೂರಿನ ಆಯನ ನಾಟಕ ಮನೆ ಇವರು ಪ್ರಸ್ತುತ ಪಡಿಸುವ ‘ದ್ವೀಪ’ ನಾಟಕದಲ್ಲಿ ಚಂದ್ರಹಾಸ ಉಳ್ಳಾಲ ಮತ್ತು ಪ್ರಭಾಕರ ಕಾಪಿಕಾಡ್ ಅಭಿನಯಿಸಲಿದ್ದಾರೆ.