ಮಂಗಳೂರು: ಸಾಹಿತಿ ಸಂಘಟಕ ಬಿ. ತಮ್ಮಯ್ಯ ಅವರ ನೆನಪಿನ ರಾಜ್ಯಮಟ್ಟದ ‘ಅತೀ ಸಣ್ಣ ಕಥೆ’ ಹಾಗೂ ಲಲಿತ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದ್ದು, ಎರಡು ವಿಭಾಗಗಳಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ‘ಅತೀ ಸಣ್ಣ ಕಥೆ’ ಸ್ಪರ್ಧೆಯು ಕಥೆಗಾರರಲ್ಲಿರುವ ಕಥಾ ಕೌಶಲವನ್ನು ಪ್ರಕಟಪಡಿಸುವ ವೇದಿಕೆಯಾಗಿದ್ದು, 250 ಪದಮಿತಿಯಲ್ಲಿ ಕಥೆಯನ್ನು ಬರೆದು ಕಳುಹಿಸಬೇಕು.
ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ತಮ್ಮ ಆಯ್ಕೆಯ ಯಾವುದಾದರೂ ವಿಷಯದ ಮೇಲೆ 5ಪುಟ ಮೀರದಂತೆ ಲಲಿತ ಪ್ರಬಂಧ ಬರೆದು ಕಳುಹಿಸಬಹುದು.
ಸ್ಪರ್ಧೆಯ ನಿಯಮಗಳು :
ಎರಡೂ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾರ್ಥಿಗಳು ಕಳುಹಿಸುವ ಬರಹಗಳು ಸ್ವಂತ ರಚನೆಯಾಗಿದ್ದು, ಎಲ್ಲಿಯೂ ಪ್ರಕಟಗೊಂಡಿರಬಾರದು. ಬರಹಗಳನ್ನು ನುಡಿ ಅಥವಾ ಯುನಿಕೋಡ್‌ನಲ್ಲಿ 12 ಫಾಂಟ್ ನಲ್ಲಿ ಬರೆದು ಕಳುಹಿಸಬೇಕು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಪ್ರಥಮ: 3,000 ರೂಪಾಯಿ, ದ್ವಿತೀಯ 2,000 ರೂಪಾಯಿ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಬರಹಗಾರರಿಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಬರಹಗಾರರು ಸ್ವ ವಿಳಾಸವನ್ನು ಮೊಬೈಲ್ ಸಂಖ್ಯೆಯೊಂದಿಗೆ ಸ್ಪಷ್ಟವಾಗಿ ನಮೂದಿಸಬೇಕು.
ಬರವಣಿಗೆಗಳನ್ನು 10 ಡಿಸೆಂಬರ್ 2024ರ ಮುಂಚಿತವಾಗಿ ಅಂಚೆ ಮೂಲಕ ಕಳುಹಿಸಿ ಕೊಡಬೇಕು.
ವಿಳಾಸ – ದಿನೇಶ್ ಸುವರ್ಣ ರಾಯಿ, ಅಧ್ಯಕ್ಷರು, ಯುವವಾಹಿನಿ ಬಂಟ್ವಾಳ ತಾಲೂಕು ಘಟಕ, ಸುವರ್ಣ ಕೇದಗೆ ರಾಯಿ, ರಾಯಿ ಗ್ರಾಮ ಮತ್ತು ಅಂಚೆ,. ಬಂಟ್ವಾಳ ತಾಲೂಕು 574211 ಇಲ್ಲಿಗೆ ಅಥವಾ yuva- vahinibantwal@gmail. com ಈ ವಿಳಾಸಕ್ಕೆ ಕಳುಹಿಸಿ ಕೊಡಬಹುದು.