ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ಹೋಬಳಿ ಕ.ಸಾ.ಪ. ಘಟಕದ ವತಿಯಿಂದ ಸಂತ ರೀತಾ ಪ್ರೌಢಶಾಲೆ ಜೆಪ್ಪು ಮಂಗಳೂರು ಇಲ್ಲಿ ದಿನಾಂಕ 01 ನವೆಂಬರ್ 2024ರಂದು ಕನ್ನಡ ರಾಜ್ಯೋತ್ಸವ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪರಿಣಾಮಕಾರಿ ಭಾಷಣ ಕಲೆಯ ಕಾರ್ಯಾಗಾರ ಜರಗಿತು.
ಉದ್ಘಾಟನಾ ಸಮಾರಂಭದಲ್ಲಿ ಹೋಬಳಿ ಘಟಕದ ಅಧ್ಯಕ್ಷರಾದ ಪ್ರೊ. ಪುಷ್ಪರಾಜ ಕೆ. ಇವರು ತರಬೇತಿಗೆ ಚಾಲನೆ ನೀಡಿದರು. ಬೆಳಾಲು ಶ್ರೀ ಧ. ಮ. ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಪ್ರಾಯೋಗಿಕ ಚಟುವಟಿಕೆಗಳಿಂದ ತರಬೇತಿಯನ್ನು ನಡೆಸಿಕೊಟ್ಟರು.
ಸಮಾರೋಪ ಸಮಾರಂಭದಲ್ಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥರು ಮಾತನಾಡುತ್ತಾ, “ಶಾಲೆಗಳಲ್ಲಿ ಕನ್ನಡದ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಕನ್ನಡಾಭಿಮಾನ ಬೆಳೆಸುವ ಮತ್ತು ಕನ್ನಡದ ಓದಿನ ಅಭಿರುಚಿ ಬೆಳೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಂಗಳೂರಿನ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಪ್ರಯತ್ನ ಶ್ಲಾಘನೀಯ. ಭಾಷಣ ಕಲೆಯ ಅಭ್ಯಾಸವು ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸಿಗೆ ಪ್ರೇರಣೆಯಾಗಬಲ್ಲುದು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕಾಧ್ಯರಾದ ಮಂಜುನಾಥ ಎಸ್ ರೇವಣ್ಕರ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕಿ ಶ್ರೀಮತಿ ಲಿಲ್ಲಿ ಮೊಂತೆರೋ ರವರು ಸ್ವಾಗತಿಸಿ, ಶ್ರೀಮತಿ ರೇಶ್ಮಾ ಡಿ’ಸೋಜ ಕಾರ್ಯಕ್ರಮ ನಿರೂಪಿಸಿ, ಸಂತ ರೀತಾ ಆಂಗ್ಲ ಮಾದ್ಯಮ ಶಾಲೆ ಇಲ್ಲಿಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಮೆಟಿಲ್ಡಾ ಡಿ ಕೋಸ್ತರವರು ಧನ್ಯವಾದ ಸಲ್ಲಿಸಿದರು.