Subscribe to Updates

    Get the latest creative news from FooBar about art, design and business.

    What's Hot

    ಕಡಲತಡಿಯ ಮನೆ ‘ಕನಸು’ವಿನಲ್ಲಿ ‘ವರ್ಷ ವೈಭವ’ ಸಾಹಿತ್ಯ ಕಾರ್ಯಕ್ರಮ

    June 28, 2025

    ಅರೆಭಾಷೆ ಕಥೆ, ಅಜ್ಜಿ ಕಥೆ, ಲೇಖನ, ಸಾಹಿತ್ಯ, ಲಲಿತ ಪ್ರಬಂಧ, ಕೃತಿಗಳ ಆಹ್ವಾನ | ಜುಲೈ 31

    June 28, 2025

    ಕೊಯ್ಯರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರಕವಿ ಕುವೆಂಪು ಉಪನ್ಯಾಸ-1

    June 28, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾಂತಾವರದಲ್ಲಿ ಯಶಸ್ವಿಯಾಗಿ ನಡೆದ ‘ಕಾಂತಾವರ ಉತ್ಸವ – 2024’
    Literature

    ಕಾಂತಾವರದಲ್ಲಿ ಯಶಸ್ವಿಯಾಗಿ ನಡೆದ ‘ಕಾಂತಾವರ ಉತ್ಸವ – 2024’

    November 5, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಕಾಂತಾವರ : ಕಾಂತಾವರ ಕನ್ನಡ ಸಂಘದಲ್ಲಿ ‘ಕಾಂತಾವರ ಉತ್ಸವ – 2024’ ಇದರ ಉದ್ಘಾಟನಾ ಸಮಾರಂಭವು ಕರ್ನಾಟಕ ರಾಜ್ಯೋತ್ಸವ ದಿನವಾದ ದಿನಾಂಕ 01 ನವೆಂಬರ್ 2024ರಂದು ನಡೆಯಿತು .
    ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡು ಘಟಕದ ಅಧ್ಯಕ್ಷರಾಗಿರುವ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಮಾತನಾಡಿ “ಕಳೆದ 48 ವರ್ಷಗಳಿಂದ ಕನ್ನಡ ನಾಡು ಹೆಮ್ಮೆಪಡುವಂತಹ ಕನ್ನಡದ ಚಟುವಟಿಕೆಗಳು ಕಾಂತಾವರ ಕನ್ನಡ ಸಂಘದಲ್ಲಿ ಅರ್ಥಪೂರ್ಣವಾಗಿ ನಡೆಯುತ್ತಿರುವುದು ಅಭಿನಂದನೀಯವಾಗಿದೆ. ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣಗೊಂಡು 50 ವರ್ಷಗಳು ಪೂರ್ಣಗೊಳ್ಳುತ್ತಿರುವ ಈ ಸಂದರ್ಭ ಕಾಸರಗೋಡು ಕನ್ನಡಿಗರಿಗೆ ಇದು ಸಂಭ್ರಮಿಸುವ ದಿನವಲ್ಲವಾದರೂ ಇಂದಿಗೂ ಕಾಸರಗೋಡಿನ ಕನ್ನಡಿಗರು ಕನ್ನಡ ನಾಡು ನುಡಿಗೆ ಸಲ್ಲಿಸುತ್ತಿರುವ ಸೇವೆ ಅನನ್ಯವಾದುದು.” ಎಂಬುದಾಗಿ ತಿಳಿಸಿದರು.
    ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರು ಸಭಾಧ್ಯಕ್ಷತೆಯಲ್ಲಿ ನಡೆಡ ಈ ಕಾರ್ಯಕ್ರಮದಲ್ಲಿ ಏಳು ಜನ ಸಾಧಕರಿಗೆ ‘ದತ್ತಿನಿಧಿ ಪ್ರಶಸ್ತಿ’ಗಳನ್ನು ಪ್ರದಾನಿಸಲಾಯಿತು. ಬಳಿಕ ಮಾತನಾಡಿದ ಅವರು “ಸರಕಾರದ ಧೋರಣೆಯಿಂದಾಗಿ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಆಘಾತಕಾರಿ ಬೆಳವಣಿಗೆ.” ಎಂದರು.
    ಹಿರಿಯ ಲೇಖಕಿ ಹಾಗೂ ಸಂಘಟಕರಾಗಿರುವ ಪ್ರೊ. ಪ್ರಮೀಳಾ ಮಾಧವ್ ಕಾಸರಗೋಡು  ಅವರು ಪ್ರಶಸ್ತಿ ಪುರಸ್ಕೃತರಿಗೆ ಶುಭಾಶಂಸನೆ ಸಲ್ಲಿಸಿದರು. ‘ನಾಡಿಗೆ ನಮಸ್ಕಾರ ಗ್ರಂಥಮಾಲೆ’ಯ ಸಂಪಾದಕರಾಗಿರುವ ಹಿರಿಯ ವಿಮರ್ಶಕರು ಹಾಗೂ ಕಾದಂಬರಿಕಾರರಾದ ಡಾ. ಬಿ.ಜನಾರ್ದನ ಭಟ್ ಅವರು ಮಾಲೆಯಲ್ಲಿ ಮೂಡಿಬರುತ್ತಿರುವ ಕೃತಿಗಳ ಮಹತ್ವವನ್ನು ತಿಳಿಸಿದರು.
    ಕಾಸರಗೋಡಿನ ಹಿರಿಯ ಸಾಹಿತಿ ಹಾಗೂ ಸಂಘಟಕರಾಗಿರುವ ಪ್ರೊ. ಪಿ. ಎನ್. ಮೂಡಿತ್ತಾಯ ಇವರು ‘ನಾಡಿಗೆ ನಮಸ್ಕಾರ ಗ್ರಂಥಮಾಲೆ’ಯ ಎಂಟು ಕೃತಿಗಳು ಮತ್ತು ‘ಸಂಸ್ಕೃತಿ ಸಂವರ್ಧನ ಮಾಲೆ’ಯ ಒಂದು ಕೃತಿಯೂ ಸೇರಿದಂತೆ ಒಟ್ಟು ಒಂಬತ್ತು ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.” ಬಳಿಕ ಮಾತನಾಡಿ “ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿ ಉಳಿಯುವ ಈ ಮಹತ್ವದ ಕೃತಿಗಳ ಪ್ರಕಟಣೆ ಈಗ 354ನ್ನು ದಾಟಿದ್ದು ಇದು ನಾಡೇ ಬೆರಗಾಗುವಂತಹ ಕನ್ನಡ ಸಂಘದ ಮಹತ್ಸಾಧನೆಯಾಗಿದೆ.” ಎಂದರು. ನಾಡಿಗೆ ನಮಸ್ಕಾರ ಗ್ರಂಥಮಾಲೆಯಲ್ಲಿ ಬಂದ ಸಾಧಕರು, ಕೃತಿಯ ಲೇಖಕರು ಮತ್ತು ಪ್ರಾಯೋಜಕರು ಹಾಗೂ ದತ್ತಿನಿಧಿಗಳ ಪ್ರಾಯೋಜಕರನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
    ಕಾರ್ಯಕ್ರಮಕ್ಕೆ ಮುನ್ನ ಮುಂಜಾನೆ ಕನ್ನಡ ಸಂಘದ ಉಪಾಧ್ಯಕ್ಷರಾದ ಸತೀಶ ಕುಮಾರ್ ಕೆಮ್ಮಣ್ಣು ಕನ್ನಡ ಧ್ವಜಾರೋಹಣ ನೆರವೇರಿಸಿದರು. ನಾಡಗೀತೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಅಧ್ಯಕ್ಷರಾದ ಡಾ. ನಾ. ಮೊಗಸಾಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿ, ಸತೀಶ್ ಕುಮಾರ್ ಕೆಮ್ಮಣ್ಣು ವಂದಿಸಿದರು. ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಮಕ ವಾಚನ – ವ್ಯಾಖ್ಯಾನ ಕಾರ್ಯಕ್ರಮ ನೆರವೇರಿತು. ಚಾಟುಕವಿ ವಿರಚಿತ ಕರ್ನಾಟಕ ಭಾಗವತದ ‘ಮಹಾಬಲಿ’ ಪ್ರಸಂಗದ ವಾಚನವನ್ನು ಯಜ್ಞೇಶ್ ಆಚಾರ್ಯ ಹೊಸಬೆಟ್ಟು ನಿರ್ವಹಿಸಿದರೆ ಸರ್ಪಂಗಳ ಈಶ್ವರ ಭಟ್ ಅವರು ವ್ಯಾಖ್ಯಾನಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ಜೆಪ್ಪು ಸಂತ ರೀತಾ ಶಾಲೆಯಲ್ಲಿ ‘ಕನ್ನಡ ರಾಜ್ಯೋತ್ಸವ ಮತ್ತು ಕಾರ್ಯಾಗಾರ’
    Next Article ಕಾರ್ಕಳದ ಕ್ರಿಯೇಟಿವ್ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ
    roovari

    Add Comment Cancel Reply


    Related Posts

    ಕಡಲತಡಿಯ ಮನೆ ‘ಕನಸು’ವಿನಲ್ಲಿ ‘ವರ್ಷ ವೈಭವ’ ಸಾಹಿತ್ಯ ಕಾರ್ಯಕ್ರಮ

    June 28, 2025

    ಅರೆಭಾಷೆ ಕಥೆ, ಅಜ್ಜಿ ಕಥೆ, ಲೇಖನ, ಸಾಹಿತ್ಯ, ಲಲಿತ ಪ್ರಬಂಧ, ಕೃತಿಗಳ ಆಹ್ವಾನ | ಜುಲೈ 31

    June 28, 2025

    ಕೊಯ್ಯರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರಕವಿ ಕುವೆಂಪು ಉಪನ್ಯಾಸ-1

    June 28, 2025

    ‘ನುಡಿ ತೋರಣ’ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಬೆಂಗಳೂರು ಇದರ ತ್ರೈವಾರ್ಷಿಕ ಸಾಹಿತ್ಯ ಸಮಾವೇಶ -2025 | ಜೂನ್ 29

    June 28, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.