ಉಳ್ಳಾಲ: ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಭಾಗವಾಗಿ ನಾಡಿನೆಲ್ಲದೆ ಸಂಚರಿಸುತ್ತಿರುವ ಸಾಹಿತ್ಯ ರಥವನ್ನು ದಿನಾಂಕ 08 ನವಂಬರ್ 2024ರ ಗುರುವಾರ ಸಂಜೆ ತೊಕ್ಕೊಟ್ಟಿನಲ್ಲಿ ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಊರು ಊರುಗಳಲ್ಲಿ ಕನ್ನಡದ ಹಬ್ಬದಂತೆ ಸಂಭ್ರಮಿಸುವಂತಾಗಲಿ. ನಾವೆಲ್ಲ ಕನ್ನಡಿಗರು ಎಂಬ ಸಂಭ್ರಮ ಅಭಿಮಾನವನ್ನು ಸಮ್ಮೇಳನ ಉಂಟುಮಾಡಲಿ.” ಎಂದು ಹೇಳಿದರು.
ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ಸಮ್ಮೇಳನದ ಆಶಯವನ್ನು ವಿವರಿಸಿ ಸಮ್ಮೇಳನದ ಯಶಸ್ಸಿಗೆ ಹಾರೈಸಿದರು.
ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಡಾ.ಧನಂಜಯ ಕುಂಬ್ಳೆ ಮಾತನಾಡಿ “ಸಾಹಿತ್ಯ ಸಮ್ಮೇಳನವು ಯಾವುದೇ ಗೊಂದಲಗಳಿಲ್ಲದೇ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡದ ವೈಚಾರಿಕತೆಯನ್ನು ಪ್ರಚುರಪಡಿಸಲಿ.” ಎಂದರು.
ಉಳ್ಳಾಲ ತಾಲೂಕು ಕಾರ್ಯನಿರ್ವಹಣಾಧಿಕಾರಿ ಗುರುದತ್ತ್, ನಗರಸಭಾಧ್ಯಕ್ಷ್ಯೆ ಶಶಿಕಲಾ ಚೆಂಬುಗುಡ್ಡೆ, ಕೌನ್ಸಿಲರ್ ಅಸ್ಗರ್ ಅಲಿ, ಉಳ್ಳಾಲ ಕ. ಸಾ. ಪ. ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು, ಕೋಶಾಧಿಕಾರಿ ಲಯನ್ ಚಂದ್ರಹಾಸ ರೈ ದೇರಳಕಟ್ಟೆ, ಉಳ್ಳಾಲ ಕ. ಸಾ. ಪ. ಹೋಬಳಿ ಅಧ್ಯಕ್ಷ್ಯೆ ವಿಜಯಲಕ್ಷ್ಮಿ ಪ್ರಸಾದ್ ರೈ, ಪದಾಧಿಕಾರಿಗಳಾದ ತೋನ್ಸೆ ಪುಷ್ಕಳ ಕುಮಾರ್, ತ್ಯಾಗಂ ಹರೇಕಳ, ಗುಣಾಜೆ ರಾಮಚಂದ್ರ ಭಟ್, ಕಾರ್ಯದರ್ಶಿ ಎಡ್ವರ್ಡ್ ಲೋಬೋ, ಮುಖಂಡರಾದ ಪ್ರಸಾದ್ ರೈ ಕಲ್ಲಿಮಾರ್, ನಗರಸಭೆಯ ಪದಾಧಿಕಾರಿಗಳು ಸಿಬ್ಬಂದಿಗಳು ಭಾಗವಹಿಸಿದ್ದರು. ತ್ಯಾಗಂ ಹರೇಕಳ ನಿರೂಪಿಸಿದರು.