ಮಂಗಳೂರು : ಹಿರಿಯ ರಂಗ ನಿರ್ದೇಶಕ ಮೋಹನಚಂದ್ರ ಯು. ಇವರು ರಚಿಸಿದ ನಾಟಕ ಕೃತಿ ‘ಕನಕ-ಪುರಂದರ’ ಇದರ ಲೋಕಾರ್ಪಣಾ ಸಮಾರಂಭವು ದಿನಾಂಕ 07 ನವೆಂಬರ್ 2024ರಂದು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಾನ್ನಿಧ್ಯ ಸಭಾಂಗಣದಲ್ಲಿ ನಡೆಯಿತು.



ಯಾಜಿ ಪ್ರಕಾಶನದ ಆಡಳಿತ ನಿರ್ದೇಶಕಿ ಸವಿತಾ ಯಾಜಿ, ಕಾರ್ಯನಿರ್ವಾಹಕ ನಿರ್ದೇಶಕ ಗಣೇಶ ಯಾಜಿ, ಹಿರಿಯ ರಂಗ ತಜ್ಞ ಐ. ಕೆ. ಬೊಳುವಾರು, ಆಯನ ನಾಟಕದ ಮನೆಯ ಸಂಸ್ಥಾಪಕ ಸದಸ್ಯ ಶ್ಯಾಮಸುಂದರ್ ರಾವ್, ಪ್ರಭಾಕರ್ ಕಾಪಿಕಾಡ್, ನಟ ಚಂದ್ರಹಾಸ್ ಉಳ್ಳಾಲ ಪಾಲ್ಗೊಂಡಿದ್ದರು. ಸಂತ ಅಲೋಶಿಯಸ್ ಪರಿಗಣಿತ ವಿ. ವಿ. ಇದರ ಡಾ. ದಿನೇಶ್ ನಾಯಕ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಹಾಗೂ ನಿರೂಪಿಸಿ, ಕೃತಿಕಾರ ಮೋಹನಚಂದ್ರ ಯು. ವಂದಿಸಿದರು.

