ಧಾರವಾಡ : ವಿದ್ಯಾಧಾರೆ ಎಜುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್ ಇದರ ಯುವ ಪ್ರತಿಭಾವಂತ ಕಲಾವಿದ, ಹಿಂದುಸ್ತಾನಿ ಗಾಯಕ ಶ್ರೀ ಬಸವರಾಜ ವಂದಲಿ ಆಯೋಜಿಸಿದ ‘ಸ್ತ್ರೀ ಗಾನ ಲಹರಿ’ ಎಂಬ ವಿಶೇಷ ಸಂಗೀತ ಕಾರ್ಯಕ್ರಮ ದಿನಾಂಕ 10 ನವೆಂಬರ್ 2024ರಂದು ಧಾರವಾಡದ ಎಮ್ಮಿಕೇರಿಯ ಸೀತಾರಾಮ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಸಂಗೀತ ಕಲಾವಿದೆ ಶ್ವೇತಾ ಮಡಪಾದಿ “ಕರ್ನಾಟಕ ಸಂಗೀತಕ್ಕೆ ಮೈಸೂರು ಎಷ್ಟು ಹೆಸರುವಾಸಿಯೋ ಹಾಗೆ ಹಿಂದುಸ್ತಾನಿ ಸಂಗೀತಕ್ಕೆ ಧಾರವಾಡದ ನೆಲ ಅಷ್ಟೇ ಪ್ರಸಿದ್ಧಿ ಪಡೆದಿದೆ. ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಗವಾಯಿಗಳ ಮಾರ್ಗದರ್ಶನದಲ್ಲಿ ಬೆಳೆದ ನೂರಾರು ಸಂಗೀತ ವಿದ್ವಾಂಸರು ಹಾಗೂ ಅವರು ಮಾರ್ಗದರ್ಶನ ನೀಡಿದ ವಿದ್ಯಾರ್ಥಿ ವರ್ಗ ಮತ್ತೆ ಧಾರವಾಡದ ನೆಲದಲ್ಲಿ ಹಿಂದುಸ್ತಾನಿ ಪರಂಪರೆಯನ್ನು ಬಹುದೊಡ್ಡ ಮಟ್ಟದಲ್ಲಿ ಮುಂದುವರಿಸುತ್ತಾ ಬಂದಿದ್ದಾರೆ. ಅದರ ಫಲವೇ ಈ ಯುವ ಪ್ರತಿಭೆ ಶ್ರೀ ಬಸವರಾಜ ವಂದಲಿ. ಈ ಯುವ ಗಾಯಕ ತನ್ನ ಶಕ್ತಿಮೀರಿ ಸಂಗೀತ ಕ್ಷೇತ್ರಕ್ಕೆ ತೊಡಗಿಸಿಕೊಂಡಿರುವ ಪರಿ ಅದ್ಭುತ.” ಎಂದರು.
ಸಭಾ ಕಾರ್ಯಕ್ರಮದ ಬಳಿಕ ಖ್ಯಾತ ಸಂಗೀತ ಕಲಾವಿದೆ ಶ್ವೇತಾ ಮಡಪಾದಿ ಇವರಿಂದ ಗಾಯನ ಗಾರ್ಯಕ್ರಮ ನೆರವೇರಿತು.