10 ಮಾರ್ಚ್ 2023, ಚಿಕ್ಕಮಗಳೂರು: ಸಾಹಿತಿ ಪೂರ್ಣಚಂದ್ರ ತೇಜಸ್ವಿ ನೆನಪಿನಾರ್ಥ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ಏಪ್ರಿಲ್ 5ರಿಂದ 7ರವರೆಗೆ ರಾಜ್ಯಮಟ್ಟದ “ಜೀವಿಲೋಕ ಸಾಹಿತ್ಯ ಸಂಭ್ರಮ” ಆಯೋಜಿಸಲಾಗಿದೆ.
ಕುವೆಂಪು ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ
ಹಾಗೂ ಪರಿಸರ, ನಿಸರ್ಗ ರಕ್ಷಣಾ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಭಾಗವಹಿಸಲು ಇಚ್ಛಿಸುವವರು ಜೀವಿಲೋಕ ಕುರಿತ ತಮ್ಮ ಕವನ, ಕಿರುಕಥೆ, ಚಿತ್ರಪಟ ಕಥನ, ಪ್ರಬಂಧ ಹಾಗೂ ಬೇರೆ ಭಾಷೆಗಳ ಜೀವಿಲೋಕ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿ ಇದೇ ಮಾರ್ಚ್ 18ರೊಳಗೆ ಕಳಿಸಬೇಕು. ಆಯ್ಕೆಯಾದ ಸಾಹಿತ್ಯ ಪ್ರಕಾರಗಳನ್ನು ‘ಜೀವಿಲೋಕ ಸಾಹಿತ್ಯ ಸಂಭ್ರಮ”ದಲ್ಲಿ ಪ್ರಸ್ತುತಪಡಿಸಲು ಅವಕಾಶ ಕಲ್ಪಿಸಲಾಗುವುದು.
ಮಾಹಿತಿಗೆ ಮೊ: 94480 77019 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Previous Articleಪುನರೂರಿನಲ್ಲಿ ಬೆಳಂದಿಗಳ ಸಾಹಿತ್ಯ ಸಮ್ಮೇಳನ