10 ಮಾರ್ಚ್ 2023, ಮಂಗಳೂರು: “ಸಾಹಿತ್ಯದಿಂದ ಮಾನವೀಯತೆ, ಸಾಮರಸ್ಯದ ಭಾವನೆ ಜಾಗೃತಗೊಳ್ಳುತ್ತದೆ. ಸಾಹಿತ್ಯ ಸಮ್ಮೇಳನಗಳು ಅಲ್ಲಲ್ಲಿ ಜರುಗಿ ಜನರಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸಬೇಕು. ಉಳ್ಳಾಲದಲ್ಲಿ ಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿರುವುದು ಶ್ಲಾಘನೀಯ.” ಎಂದು ಶಾಸಕ ಯು ಟಿ ಖಾದರ್ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉಳ್ಳಾಲ ತಾಲೂಕು ಘಟಕದ ವತಿಯಿಂದ ಮಾರ್ಚ್ 17ರಂದು ಆಯೋಜಿಸಿರುವ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ ಎಂ. ಪಿ. ಶ್ರೀನಾಥ್ ಮಾತನಾಡಿ “ಸಾಹಿತ್ಯ ಸಮ್ಮೇಳನಗಳು ಸ್ಥಳೀಯ ಸಾಹಿತಿಗಳಿಗೆ ವೇದಿಕೆಗಳನ್ನು ನೀಡುವುದರ ಜೊತೆಗೆ ಹೊಸ ಬರಹಗಾರರನ್ನು ನಾಡಿಗೆ ಪರಿಚಯಿಸುವ ಕಾರ್ಯವನ್ನು ನಡೆಸಬೇಕು. ಉಳ್ಳಾಲ ಸಾಹಿತ್ಯ ಸಮ್ಮೇಳನದಲ್ಲಿ ಉಚ್ಚಿಲ ಮೂಲದ ಪ್ರಸ್ತುತ ಮುಂಬೈಯಲ್ಲಿ ನೆಲೆಸಿರುವ ಶ್ಯಾಮಲಾ ಮಾಧವ ಇವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದರ ಮೂಲಕ ಊರಿಗೂ ಹೊರನಾಡಿಗೂ ಗೌರವ ಕೊಟ್ಟಂತೆ ಆಗಿದೆ” ಎಂದು ಹೇಳಿದರು ಮಂಗಳೂರಿನ ಉಪ ವಿಭಾಗಾಧಿಕಾರಿ ರಾಜು ಉಳ್ಳಾಲ, ತಹಶೀಲ್ದಾರ್ ಪುಟ್ಟರಾಜು, ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಉಳ್ಳಾಲದ ಸಿ. ಡಿ .ಪಿ .ಓ .ಶೈಲಾ, ಉಪ ತಹಶೀಲ್ದಾರ್ ನವನೀತ್, ಸಾಮಾಜಿಕ ಮುಖಂಡ ಸತೀಶ್ ಕುಂಪಲ, ಕ. ಸ .ಪ .ಘಟಕದ ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ, ಸ್ವಾಗತ ಸಮಿತಿಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರು ಉಪಸ್ಥಿತರಿದ್ದರು.
ಕಸಾಪ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷರಾದ ಡಾ ಧನಂಜಯ ಕುಂಬಳೆ ಸ್ವಾಗತಿಸಿದರು. ಕಾರ್ಯದರ್ಶಿಗಳಾದ ರವೀಂದ್ರ ರೈ ಕಲ್ಲಿಮಾರು ವಂದಿಸಿ, ಸಂಘಟನಾ ಕಾರ್ಯದರ್ಶಿ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
ಉಳ್ಳಾಲ ತಾಲೂಕು, ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ
Previous Articleಕೊಟ್ಟಿಗೆಹಾರದಲ್ಲಿ ಸಾಹಿತ್ಯ ಸಂಭ್ರಮ: ಲೇಖನ ಆಹ್ವಾನ
Next Article ಬೈಪಡಿತ್ತಾಯ ದಂಪತಿಗೆ ಪ್ರಶಸ್ತಿ