ಉಡುಪಿ : ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನಾ ಪೀಠ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂ.ಜಿ.ಎಂ ಕಾಲೇಜು ಉಡುಪಿ ಹಾಗೂ ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ) ಪರ್ಕಳ ಸಂಸ್ಥೆಗಳು ಜಂಟಿಯಾಗಿ ಆಯೋಜಿಸುವ 46ನೆಯ ‘ವಾದಿರಾಜ ಕನಕದಾಸ ಸಂಗೀತೋತ್ಸವ’ ಕಾರ್ಯಕ್ರಮವು ದಿನಾಂಕ 06, 07 ಮತ್ತು 08 ಡಿಸೆಂಬರ್ 2024ರಂದು ಉಡುಪಿಯ ಎಂ. ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಪ್ರಯುಕ್ತ ಪ್ರಾಥಮಿಕ, ಪ್ರೌಢ, ಕಾಲೇಜು, ಸ್ನಾತಕೋತ್ತರ ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗಾಗಿ ವಾದಿರಾಜ-ಕನಕ ಗಾಯನ ಸ್ಪರ್ಧೆಯನ್ನು ದಿನಾಂಕ 07 ಡಿಸೆಂಬರ್ 2024ರಂದು ಮಧ್ಯಾಹ್ನ ಘಂಟೆ 2.00ರಿಂದ ಎಂ. ಜಿ. ಎಂ ಕಾಲೇಜಿನ ಆವರಣದಲ್ಲಿರುವ ಗೀತಾಂಜಲಿಯಲ್ಲಿ ಆಯೋಜಿಸಲಾಗಿದೆ, ಸ್ಪರ್ಧಾಳುಗಳು ವಾದಿರಾಜರ ಮತ್ತು ಕನಕದಾಸರ ಎರಡೆರಡು ಕೀರ್ತನೆಗಳನ್ನು ಅಭ್ಯಸಿಸಿ, ತೀರ್ಪುಗಾರರು ಕೇಳುವ ನಾಲ್ಕು ಕೀರ್ತನೆಗಳಲ್ಲಿ ಯಾವುದಾದರು ಒಂದು ಕೀರ್ತನೆಯನ್ನು ಹಾಡಲು ಶಕ್ತರಿರಬೇಕು. ಭಾಗವಹಿಸಲು ಇಚ್ಛಿಸುವವರು ಕಡ್ಡಾಯವಾಗಿ ತಮ್ಮ ಹೆಸರು, ವಿಳಾಸವನ್ನು 01 ಡಿಸೆಂಬರ್ 2024ರ ಒಳಗಾಗಿ ಆಡಳಿತಾಧಿಕಾರಿಗಳು, ಕನಕದಾಸ ಅಧ್ಯಯನ ಸಂಶೋಧನ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ. ಜಿ. ಎಂ. ಕಾಲೇಜು ಆವರಣ, ಉಡುಪಿ576102 ಈ ವಿಳಾಸಕ್ಕೆ ಕಳುಹಿಸಿಕೊಡಬೇಕಾಗಿ ವಿನಂತಿಸಲಾಗಿದೆ. ಸ್ಥಳದಲ್ಲಿ ನೋಂದಣಿ ಇರುವುದಿಲ್ಲ ಎಂದು ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬೇಕಾದ ದೂರವಾಣಿ: 9964140601, 9480575783 ಅಥವಾ ಕಚೇರಿ 0820 – 2512259 ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಇಮೇಲ್: [email protected]