ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಕೃಪಾಶ್ರಯದಲ್ಲಿ ಯಕ್ಷರಂಗ ಪುತ್ತೂರು ದ.ಕ. ಇದರ ವತಿಯಿಂದ ಬಡಗುತಿಟ್ಟಿನ ಯಕ್ಷಗಾನ ಬಯಲಾಟವನ್ನು ದಿನಾಂಕ 16 ನವೆಂಬರ್ 2024ರಂದು ಸಂಜೆ 4-30 ಗಂಟೆಗೆ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ.
‘ಸುಧನ್ವಾರ್ಜುನ – ಗದಾಯುದ್ ಪೌರಾಣಿಕ ಕಥಾನಕಗಳ ಪ್ರಸಂಗದ ಯಕ್ಷಗಾನ ಬಯಲಾಟದಲ್ಲಿ ಹಿಮ್ಮೇಳದಲ್ಲಿ ಶ್ರೀ ರಾಮಕೃಷ್ಣ ಹಿಲ್ಲೂರು ಮತ್ತು ಶ್ರೀ ಸರ್ವೇಶ್ವರ ಹೆಗಡೆ ಭಾಗವತರಾಗಿ, ಶ್ರೀ ರಾಘವೇಂದ್ರ ಯಲ್ಲಾಪುರ ಮತ್ತು ಶ್ರೀ ಪ್ರಜ್ವಲ ಮುಂಡಾಡಿ ಮೃದಂಗ ಮತ್ತು ಚೆಂಡೆಯಲ್ಲಿ ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ಶ್ರೀ ಉದಯ ಹೆಗಡೆ ಕಡಬಾಳ – ಸುಧನ್ವ, ಶ್ರೀ ವಿದ್ಯಾಧರ ಜಲವಳ್ಳಿ – ಕೌರವ, ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ – ಅರ್ಜುನ, ಶ್ರೀ ಆನಂದ ಕೆಕ್ಕಾರು – ಸಂಜಯ, ಶ್ರೀ ಕೆ.ಜಿ. ಕಾರ್ತಿಕ – ಪ್ರದ್ಯುಮ್ನ, ಶ್ರೀ ಮೂರೂರು ನಾಗೇಂದ್ರ – ಧರ್ಮರಾಯ, ಶ್ರೀ ಶಂಕರ ಹೆಗಡೆ ನೀಲ್ಕೋಡು – ಪ್ರಭಾವತಿ, ಶ್ರೀ ಶಂಕರ ಹೆಗಡೆ ನೀಲ್ಕೋಡು – ಭೀಮ, ಶ್ರೀ ಅನಂತ ಯಲ್ಲಾಪುರ – ವೃಷಕೇತು, ಶ್ರೀ ಚಪ್ಪರಮನೆ ಶ್ರೀಧರ ಹೆಗಡೆ – ಬೇವಿನಚರ, ಸನ್ಮಯ ಮಲವಳ್ಳಿ – ಕೃಷ್ಣ, ಶ್ರೀ ಅನಂತ ಯಲ್ಲಾಪುರ – ಅರ್ಜುನನಾಗಿ ಪಾತ್ರ ನಿರ್ವಹಿಸಲಿದ್ದಾರೆ.