ಕಾಸರಗೋಡು: ಕಾಸರಗೋಡು ಪಾರೆಕಟ್ಟೆ ಕನ್ನಡ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೇರಳ ರಾಜ್ಯ ಘಟಕ ಕಾಸರಗೋಡು ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಗ್ರಾಮ ಕಾಸರಗೋಡು ಇದರ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ ದಿನಾಂಕ 10 ನವೆಂಬರ್ 2024ರಂದು ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಸಿ. ಎನ್. ಅಶೋಕ್ ಮಾತನಾಡಿ “ಗಡಿನಾಡು ಕಾಸರಗೋಡಿನಲ್ಲಿ ನಡೆಯುತ್ತಿರುವ ಕನ್ನಡ ಚಟುವಟಿಕೆಗಳು ಇಲ್ಲಿನ ಭಾಷೆ ಹಾಗೂ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಗಡಿನಾಡಿನ ಕನ್ನಡಿಗರು ನಡೆಸುತ್ತಿರುವ ಹೋರಾಟ ಶ್ಲಾಘನೀಯವಾದುದು.” ಎಂದರು.
ಹರ್ಷಿತಾ ಪಿ. ಪೆರ್ಲ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರವಣ ಬೆಳಗೊಳದ ಶಾಸಕರಾದ ಸಿ. ಎನ್. ಬಾಲಕೃಷ್ಣ ಹಾಗೂ ಕುಸುಮಾ ದಂಪತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಹ ಅಧ್ಯಕ್ಷೆ ಶಿವಾನಿ ಕೂಡ್ಲು, ಕನ್ನಡ ಸಾಹಿತ್ಯ ಪರಿಷತ್ ಇದರ ಕೇರಳ ಗಡಿನಾಡು ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ, ನಗರಸಭಾ ವಿಪಕ್ಷ ನಾಯಕ ಪಿ. ರಮೇಶ್, ಧನಂಜಯ ಕುಂಬಳೆ, ವಿ. ಬಿ. ಕುಳಮರ್ವ, ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳೆ, ನಗರಸಭಾ ಮಾಜಿ ಸದಸ್ಯ ಶಂಕರ ಕೆ., ವಿಶಾಲಾಕ್ಷ ಪುತ್ರಕಳ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ, ಕೆ. ಸತೀಶ್ ಕೂಡ್ಲು, ರಮೇಶ್ ಎಂ., ಲವ ಕೆ.ಮೀಪುಗುರಿ, ರಾಮ್ ಪ್ರಸಾದ್, ತೆಕ್ಸಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಎಂ. ಶಾಹೀದ್, ಡಿ. ಜಯರಾಮ್, ಪುರುಷೋತ್ತಮ ನಾಯ್ಡ್, ಡಾ. ರಮೇಶ್ ಆಳ್ವ, ಸುಭಾಷ್, ಗುರುಪ್ರಸಾದ್ ಕೋಟೆಕಣಿ, ಶ್ರೀವಲ್ಲಿ ಎನ್. ಆರ್. ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಶಾಲಿನಿ ಸತೀಶ್ ಶೆಟ್ಟಿ ಥಾಣೆ ಇವರಿಗೆ ಕರಾವಳಿ ಪ್ರತಿಭಾಶಾಲಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಯಿತು. ಶಿವರಾಮ ಕಾಸರಗೋಡು ಪ್ರಾಸ್ತಾವಿಕ ಮಾತನಾಡಿ, ಕೆ.ಜಗದೀಶ್ ಕೂಡು ನಿರೂಪಿಸಿ, ಕಾವ್ಯಾ ಕುಶಲ ಸಾಗತಿಸಿ, ವಂದಿಸಿದರು.