ಬದಿಯಡ್ಕ : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಬೆಂಗಳೂರು ಇದರ ವತಿಯಿಂದ ತುಳುರತ್ನ ಬಹುಭಾಷಾ ವಿದ್ವಾಂಸ ಡಾಕ್ಟರ್ ಪಿ. ವೆಂಕಟರಾಜು ಪುಣಿಂಚಿತ್ತಾಯರ ‘ಪುವೆಂಪು ನೆನಪು -2024’ ಕಾರ್ಯಕ್ರಮವನ್ನು ದಿನಾಂಕ 20 ನವೆಂಬರ್ 2024ರಂದು ಬೆಳಿಗ್ಗೆ 9-00 ಗಂಟೆಗೆ ಬದಿಯಡ್ಕದ ವಳಮಲೆ ಇರಾ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಬೆಳಿಗ್ಗೆ 9-00 ಗಂಟೆಗೆ ಶ್ರೀಮತಿ ಸಂಧ್ಯಾಗೀತ ಬಾಯಾರು ಮತ್ತು ಬಳಗದವರಿಂದ ‘ಭಾವ ಗಾಯನ’ ನಡೆಯಲಿದೆ. ಬ್ರಹ್ಮಶ್ರೀ ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಅಸ್ತ್ರ ಇವರ ದಿವ್ಯ ಸಾನಿಧ್ಯದಲ್ಲಿ ಹಿರಿಯ ಕವಿ ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿರುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇವಿನ ಮರದ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಎಸ್. ಪ್ರದೀಪ ಕುಮಾರ ಕಲ್ಕೂರ ಇವರು ನುಡಿ ನಮನ, ಡಾ. ರಾಧಾಕೃಷ್ಣ ಬೆಳ್ಳೂರು ಇವರು ಕೃತಿ ಪರಿಚಯ ಹಾಗೂ ಶಾಸಕರಾದ ಶ್ರೀ ಎನ್.ಎ. ನೆಲ್ಲಿಕುನ್ನು ಇವರು ಹಿರಿಯ ವಿದ್ವಾಂಸ ಯಕ್ಷಗಾನ ಅರ್ಥದಾರಿಗಳಾದ ಶ್ರೀ ಬೆಳ್ಳಿಗೆ ನಾರಾಯಣ ಮಣಿಯಾಣಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಿರುವರು.