ಕಲಬುರಗಿ : ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ‘ಅಮ್ಮ ಪ್ರಶಸ್ತಿ’ಗೆ 10 ಮಂದಿ ಲೇಖಕರು ಆಯ್ಕೆಯಾಗಿದ್ದಾರೆ.
ವಿದ್ಯಾರಶ್ಮಿ ಪೆಲತ್ತಡ್ಕ – ಕರೆ ದಡ, ಡಾ. ಎಚ್.ಎಸ್. ಸತ್ಯನಾರಾಯಣ – ಬಿದಿರ ತಡಿಕೆ, ಪ್ರಭಾವತಿ ದೇಸಾಯಿ – ಸೆರಗಿಗಂಟಿದ ಕಂಪು, ವೀರೇಂದ್ರ ರಾವಿಹಾಳ್ – ಡಂಕಲ್ ಪೇಟೆ, ಪೂರ್ಣಿಮಾ ಮಾಳಗಿಮನಿ – ಮ್ಯಾಜಿಕ್ ಸೌಟು, ದ್ವಾರನಕುಂಟೆ ಪಾತಣ್ಣ – ರಾಣಿ ಅಹಲ್ಯಾಬಾಯಿ ಹೋಳ್ಕರ್, ಗುರುಪ್ರಸಾದ ಕಂಟಲಗೆರೆ – ಅಟ್ರಾಸಿಟಿ, ಡಾ. ಪರ್ವಿನ್ ಸುಲ್ತಾನಾ – ಶರಣರ ನಾಡಿನ ಸೂಫಿ ಮಾರ್ಗ, ಡಾ. ಪ್ರಕಾಶ ಭಟ್ – ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ ಹಾಗೂ ಮಂಜುನಾಥ ಚಾಂದ್ – ಪ್ರಿಯ ಮೀರಾ ಕೃತಿಗಳನ್ನು 24ನೇ ವರ್ಷದ ‘ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲ ರೆಡ್ಡಿ ಮುನ್ನೂರ್ ತಿಳಿಸಿದ್ದಾರೆ. ಪತ್ರಕರ್ತ-ಲೇಖಕ ಮಹಿಪಾಲ ರೆಡ್ಡಿ ಮುನ್ನೂರ್ ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿರುವ ಈ ಪ್ರಶಸ್ತಿಯು ತಲಾ ರೂ.2,500/- ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಈ ನೆಲದ ತೊಗರಿ ಬೇಳೆಗಳನ್ನು ಒಳಗೊಂಡಿರುತ್ತದೆ. ಎಲ್ಲಾ ವಿಭಾಗದಲ್ಲಿ ಲೇಖಕರು ಪ್ರಶಸ್ತಿಯನ್ನು ಹಂಚಿಕೊಂಡಿದ್ದು, ದಿನಾಂಕ 26 ನವೆಂಬರ್ 2024ರಂದು ಸೇಡಂನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.