ಧಾರವಾಡ : ಧಾರವಾಡದ ರಂಗ ಸಂಸ್ಥೆಯಾದ ಅಭಿನಯ ಭಾರತಿ ಇದರ ವತಿಯಿಂದ ದಿನಾಂಕ 23 ನವೆಂಬರ್ 2024ರಂದು ಸಂಜೆ 5-30 ಗಂಟೆಗೆ ಧಾರವಾಡ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ದಿ. ಡಾ. ಸುಲಭಾ ದತ್ತ ನೀರಲಗಿ ಸ್ಮರಣಾರ್ಥ ಶ್ರೀ ದತ್ತ ನೀರಲಗಿ ಇವರು ನೀಡಿದ ದತ್ತಿ ಕಾರ್ಯಕ್ರಮದ ಅಂಗವಾಗಿ ‘ನಾ ರಾಜಗುರು’ ನಾಟಕ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿದೆ.
ಪ್ರಸಿದ್ಧ ಚರ್ಮರೋಗ ತಜ್ಞರು ಮತ್ತು ಲೇಖಕರಾದ ಡಾ. ವಿಜಯೇಂದ್ರ ದೇಸಾಯಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಶ್ರೀ ದತ್ತ ನೀರಲಗಿ ಮತ್ತು ಅಭಿನಯ ಭಾರತಿ ಅಧ್ಯಕ್ಷರಾದ ಅರವಿಂದ ಕುಲಕರ್ಣಿ ಉಪಸ್ಥಿತರಿರುತ್ತಾರೆ. ಇದೇ ಸಂದರ್ಭದಲ್ಲಿ ಶ್ರೀಮತಿ ಸುಲಭಾ ದತ್ತ ನೀರಲಗಿ ಸ್ಮರಣಾರ್ಥ ‘ಮಹಿಳಾ ರಂಗಕರ್ಮಿ’ ಪ್ರಥಮ ಪ್ರಶಸ್ತಿಯನ್ನು ಶ್ರೀಮತಿ ವಿಷಯಾ ಜೇವೂರ ಇವರಿಗೆ ನೀಡಲಾಗುವದು.
ಸಾಂಕೇತಿವಾಗಿ ಅಭಿನಯ ಭಾರತಿಯ ರಂಗ ಕಾರ್ಯಾಗಾರದ ಭಾಗವಾದ ‘ಏನು ಬೇಡಲಿ ನಿನ್ನ ಬಳಿಗೆ ಬಂದು ?’ ನಾಟಕ ತಯಾರಿ ಹಾಗೂ ತಾಲೀಮಿನ ಉದ್ಘಾಟನೆ ನೆರವೇರಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ವಿಶ್ವರಾಜ ರಾಜಗುರು ಇವರಿಂದ ಏಕವ್ಯಕ್ತಿ ಪ್ರದರ್ಶನದ ‘ನಾ ರಾಜಗುರು ಪಂಡಿತ್ ಬಸವರಾಜ ರಾಜಗುರು ಬದುಕಿನ ವೃತ್ತಾಂತದ ಸಂಗೀತ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕದ ನಿರ್ದೇಶನ ಮತ್ತು ಪರಿಕಲ್ಪನೆ ಶ್ರೀ ಮಹಾದೇವ ಹಡಪದ, ಸಹ ಕಲಾವಿದರು – ಹಾರ್ಮೋನಿಯಂನಲ್ಲಿ ಶ್ರೀ ಬಸವರಾಜ ಹಿರೇಮಠ ಮತ್ತು ತಬಲಾದಲ್ಲಿ ಶ್ರೀ ಜಯತೀರ್ಥ ಪಂಚಮುಖಿ ಇವರು ಸಹಕರಿಸಲಿದ್ದಾರೆ.