ಉಡುಪಿ : ತುಳುಕೂಟ ಉಡುಪಿ (ರಿ.) ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ದಿ. ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ ‘ತುಳು ಭಾವಗೀತೆ ಸ್ಪರ್ಧೆ -2024’ಯನ್ನು ದಿನಾಂಕ 24 ನವೆಂಬರ್ 2024ರಂದು ಅಪರಾಹ್ನ 2-00 ಗಂಟೆಗೆ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಆಯೋಜಿಸಲಾಗಿದೆ.
ಈ ಸ್ಪರ್ಧೆಯು 1ರಿಂದ 5ನೇ ತರಗತಿ – ಬಾಲ ವಿಭಾಗ, 6ರಿಂದ 10ನೇ ತರಗತಿ – ಕಿರಿಯ ವಿಭಾಗ, ಕಾಲೇಜು ವಿದ್ಯಾರ್ಥಿಗಳು – ಹಿರಿಯ ವಿಭಾಗ ಮತ್ತು 25 ವರ್ಷ ಮೇಲಿನವರು – ಸಾರ್ವಜನಿಕ ವಿಭಾಗ ಹೀಗೆ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ. ಗೂಗಲ್ ನಲ್ಲಿ ಐಲೇಸಾ ಮ್ಯೂಸಿಕ್ ಚಾನೆಲ್ ಎಂದು ಹುಡುಕಿದರೆ ಖ್ಯಾತ ಹಿನ್ನೆಲೆ ಗಾಯಕರು ರಮೇಶ್ಚಂದ್ರರವರು ಹಾಡಿರುವ ಅನೇಕ ತುಳು ಭಾವಗೀತೆಗಳು ಸಿಗುತ್ತದೆ. ತುಳು ಭಾಂದವರು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಿ ತುಳು ಭಾಷೆ ಉಳಿಸಿ ಬೆಳೆಸುವಲ್ಲಿ ಕೈ ಜೋಡಿಸಬೇಕಾಗಿ ತುಳು ಭಾವಗೀತೆ ಸ್ಪರ್ಧೆಯ ಸಂಚಾಲಕರಾದ ಜಯರಾಂ ಮಣಿಪಾಲ್ ವಿನಂತಿಸಿಕೊಂಡಿದ್ದಾರೆ.
ತುಳುಕೂಟ ಉಡುಪಿ ಇದರ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರ ಅಧ್ಯಕ್ಷತೆಯಲ್ಲಿ ಉಡುಪಿಯ ಹಿರಿಯ ವಕೀಲರಾದ ಶ್ರೀ ಎಂ. ಶಾಂತಾರಾಮ್ ಶೆಟ್ಟಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಸಂಜೆ 5-00 ಗಂಟೆಗೆ ತುಳು ಭಾವಗೀತೆ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಲಿದೆ.