ಕುಂಬಳೆ : ಬದಿಯಡ್ಕದ ಸಮತಾ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಮಧೂರು ಉಳಿಯದ ತರುಣ ಕಲಾ ವೃಂದ (ರಿ.) ಇವರ ಸಹಯೋಗದಲ್ಲಿ ‘ಡಾ. ಮಹೇಶ್ವರಿ ಯು. ಸಾಹಿತ್ಯ ಸಲ್ಲಾಪ’ ಕಾರ್ಯಕ್ರಮವನ್ನು ದಿನಾಂಕ 24 ನವೆಂಬರ್ 2024ರಂದು ಪರಕ್ಕಿಲ ಶ್ರೀ ಮಹಾದೇವ ಕ್ಷೇತ್ರದ ನಟರಾಜ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಶ್ರೀ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರ ಅಧ್ಯಕ್ಷತೆಯಲ್ಲಿ ಉಳಿಯ ತರುಣ ಕಲಾ ವೃಂದದ ಗೌರವಾಧ್ಯಕ್ಷರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಬೆಳಿಗ್ಗೆ 11-00 ಗಂಟೆಗೆ ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ ಇವರ ಅಧ್ಯಕ್ಷತೆಯಲ್ಲಿ ‘ಡಾ. ಮಹೇಶ್ವರಿ ಯು. ಸಾಹಿತ್ಯ ದರ್ಶನ’ ವಿಷಯ ಮಂಡನೆಯಲ್ಲಿ ಕಾವ್ಯದ ಬಗ್ಗೆ : ಸಾಹಿತಿ ಡಾ. ಸೌಮ್ಯ ಪ್ರಸಾದ್, ಲೇಖನ, ಅಂಕಣ ಬರಹಗಳ ಬಗ್ಗೆ ಸಂಶೋಧನಾ ವಿದ್ಯಾರ್ಥಿ ಶ್ರೀ ಕಾರ್ತಿಕ್ ಪಡ್ರೆ ಹಾಗೂ ವಿಮರ್ಶೆ, ಸಂಶೋಧನೆಯ ಬಗ್ಗೆ ಸಾಹಿತಿ ಡಾ. ಸುಭಾಷ್ ಪಟ್ಟಾಜೆ ಇವರುಗಳು ಮಾತನಾಡಲಿದ್ದಾರೆ. ಮಧ್ಯಾಹ್ನ 12-00 ಗಂಟೆಗೆ ಡಾ. ಮಹೇಶ್ವರಿ ಯು. ಅವರೊಂದಿಗೆ ಸಂವಾದ, ಹಿರಿಯ ಕವಿ ಶ್ರೀಕೃಷ್ಣಯ್ಯ ಅನಂತಪುರ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಮತ್ತು 3-00 ಗಂಟೆಗೆ ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತೋಡಿ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.