13-03-2023,ಮಂಗಳೂರು: ಜನಪದರು ಸಾಂಸ್ಕೃತಿಕ ವೇದಿಕೆ ಪ್ರಸ್ತುತ ಪಡಿಸುವ,ಮುದೇನೂರು ಸಂಗಣ್ಣ ರಚನೆಯ ‘ಸೂಳೆ ಸಂಕವ್ವ’ನಾಟಕವು ಇದೇ ಬರುವ 14-03-2023 ರಂದು ಬೆಂಗಳೂರಿನ ರಂಗಶಂಕರದಲ್ಲಿ ಪ್ರದೇಶನ ಗೊಳ್ಳಲಿದೆ
ನಾಟಕದ ಬಗ್ಗೆ
ಮುದೇನೂರು, ಸಂಘಣ್ಣನವರ ಅಪರೂಪದ ನಾಟಕ ಸೂಳೆ ಸಂಕಪ್ಪ 12 ನೇ ಶತಮಾನದ ಬಸವ ಕ್ರಾಂತಿಯ ಸಮಸಮಾಜ , ಅಂಗತಾರತಮ್ಯ ,ಮೇಲು ಕೀಳುಗಳ ವಿರುದ್ಧ ದನಿ ಎತ್ತುವ ಅಂಶವುಳ್ಳ ಕಲ್ಯಾಣ ನಗರಿಯ ವೇಶ್ಯೆ ಒಬ್ಬಳು ಆನುಭವ ಮಂಟಪದ ಅರಿವಿನಿಂದ ಹಂಗುಗಿತ್ತಿಯ ಬದುಕನ್ನು ದಿಕ್ಕರಿಸಿ ಮುಖ್ಯ ವಾಹಿನಿಗೆ ಬಂದು ಗೌರವಯುತ ಜೀವನ ನಡೆಸುವ ಪುರಷ ಸಮಾಜದ ದೌರ್ಜನ್ಯಗಳನ್ನು ವಿರೋಧಿಸುವ ಶರಣೆಯಕಥೆ
ನಿರ್ದೇಶಕ ರಾಮಕೃಷ್ಣ ಬೆಳತ್ತೂರು
ರಾಮಕೃಷ್ಣ ಬೆಳತ್ತೂರು ಕನ್ನಡ ರಂಗ ಭೂಮಿಯ ಯುವ ಉತ್ಸಾಹಿ , ರಂಗಕರ್ಮಿಗಳು, ಕಲೆಯೇ ಜೀವನ ಕಾಯಕವಾಗಿಸಿಕೊಂಡವರು ಔಪಚಾರಿಕ ರಂಗ ಶಿಕ್ಷಣ ಪಡೆದರೂ ಅನುಭವದ ಮೂಲಕವೇ ಶ್ರೇಷ್ಟತೆ ಸಾಧಿಸಿದ್ದಾರೆ, ಕಾಡುಗೋಡಿ ಬೆಳತ್ತೂರಿನ ಇವರು ಎರಡು ದಶಕಗಳಿಗಿಂತ ಹೆಚ್ಚುಕಾಲ ರಂಗ ಭೂಮಿಯಲ್ಲಿ ತೊಡಗಿದ್ದಾರೆ.ಖ್ಯಾತ ರಂಗಕರ್ಮಿ ಮೇಕಪ್ ನಾಣಿ. ಅವರ ಮೆಚ್ಚಿನ ಶಿಷ್ಯರೂ ಹೌದು ಜನಪದರು ಸ್ಥಾಪಕ ಸದಸ್ಯರಾದ ಅವರು ನಾಡಿನಾದ್ಯಂತ ಹಲವಾರು ರಂಗಶಿಬಿರ, ನೇಪಥ್ಯ ಶಿಬಿರ ಹಮ್ಮಿಕೊಂಡು ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ, ಇವರು ಸ್ವತಂತ್ರ ನಾಟಕಕಾರರು , ಅನುವಾದಕರೂ ಹೌದು. ನಮ್ಮ ತಂಡಕ್ಕಾಗಿ ನಾಯಿತಿಪ್ಪ, ತಿರುಕರಾಜ, ದುರ್ಗಾಸ್ತಮಾನ , ತಾಜ್‌ಮಹಲ್ ಕಾ ಟೆಂಡರ್, ಆಗ್ನಿ ದಿವ್ಯ, ಕಿಂದರಜೋಗಿ, ಸುಮ್‌ಸುಮ್ಕೆ ನಾಟಕಗಳನ್ನು ನಿರ್ದೇಶಿಸಿದ್ದಾರೆ.ಇವರ ಸೇವೆಗೆ ಕರ್ನಾಟಕ ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, “ ಮೇಕಪ್ ನಾಣಿ – ಪ್ರಶಸ್ತಿಗಳು ಲಬಿಸಿವೆ. ಅಲ್ಲದೇ ಭಾರತದ ರಂಗಭೂಮಿ ಮೈಲುಗಲ್ಲು ಎನಿಸಿಕೊಂಡ “ಮಲೆಗಳಲ್ಲಿ ಮದುಮಗಳು ” ಮತ್ತು ಪರ್ವ ನಾಟಕಗಳಗೆ ವಸ್ತ್ರ ವಿನ್ಯಾಸ ಪ್ರಸಾದನ ಮಾಡಿದ ಹಿರಿಮೆ ಇವರದು, ಈಗ ಶಿವಸಂಚಾರದ ಬೆಳ್ಳಿ ಹಬ್ಬದ ಪ್ರಯುಕ್ತ ನಾಡಿದ 31 ಜಿಲ್ಲೆಗಳಲ್ಲಿ ನವೆಂಬರ್ 15 ರಂದು ಪ್ರದರ್ಶನವಾಗುವ ಬಸವಶರಣ ದರ್ಶನ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ “ಸೂಳೆ ಸಂಕವ್ವ” ನಾನಕವನ್ನು ನಮ್ಮ ತಂಡಕ್ಕೆ”ನಿರ್ದೇಶಿಸುತ್ತಿದ್ದಾರೆ
ಜನಪದರು….
`ಕರ್ನಾಟಕ ರಂಗಭೂಮಿಯಲ್ಲಿ ಕಳೆದ ಇಪ್ಪತೈದು ವರ್ಷಗಳಿಂದ ಸದಾ ಕ್ರಿಯಾಶೀಲವಾಗಿರುವ ಬೆಂಗಳೂರು ಗ್ರಾಮಾಂತರ ಪ್ರದೇಶದ ನಾವು ಜನಪದರು. ಬದುಕಿಗಾಗಿ ಕಲೆ ಎಂದು ನಂಬಿದ್ದೇವೆ. ಜನಪರ ಧ್ವನಿಯಾಗಿದ್ದೇವೆ, ಬೀದಿ ನಾಟಕದ ಚಳುವಳಿಯ ಮುಖಾಂತರ ಜನಜಾಗೃತಿಗೆ ತೊಡಗಿ ಹಂತ ಹಂತವಾಗಿ ಪ್ರಯೋಗಾತ್ಮಕ ಸದಭಿರುಚಿಯ ನಾಟಕಗಳನ್ನು ಆಯ್ದು ‘ಜನಪದರು’ ಹೆಸರಿಗೆ ಅನ್ವರ್ಥವಾಗಿ ಜಾನಪದೀಯ ಅಂಶವುಳ್ಳ ನಾಟಕಗಳಾದ ಕೋಟಗಾನಹಳ್ಳಿ ರಾಮಯ್ಯನವರ ನಾಯಿತಿಪ್ಪ, ನಿಸರ್ಗಪ್ರಿಯರ ತಿರುಕರಾಜ, ಡಾ. ಚಂದ್ರಶೇಖರ ಕಂಬಾರರ ಸಾಂಬಶಿವ ಪ್ರಹಸನ, ಸುರೇಶ್ ವರ್ತೂರು ಮತ್ತು ರಾಮಕೃಷ್ಣ ಬೆಳ್ತೊರು ರಂಗರೂಪಾಂತರಿಸಿದ ತರಾಸುರವರ ದುರ್ಗಾಸ್ತಮಾನ, ಅಗ್ನಿದಿವ್ಯ, ಕಿಂದರಜೋಗಿ, ಸುಮ್‌ಸುಮ್ಮೆ, ಈ ಎಲ್ಲ ನಾಟಕಗಳನ್ನು ರಂಗನಿರ್ದೇಶಕ, ಮೇಕಪ್ ತಜ್ಞ ರಾಮಕೃಷ್ಣ ಬೆಳ್ತೊರು ನಿರ್ದೇಶಿಸಿದ್ದಾರೆ.
ಮುಖದಲ್ಲಿ ಮಂದಹಾಸ ಮೂಡಿಸಿ ನಗಿಸಲು ರಾಮಕೃಷ್ಣಬೆಳತ್ತೂರರ ನಿರ್ದೇಶನದಲ್ಲಿ ತಮ್ಮಮುಂದೆ ಸುಮ್‌ಸುಮ್ಮೆ ನಾಟಕವನ್ನು ಹಾಗೂ ಈಗ ಬಸವಾದಿ ಶರಣರ ದರ್ಶನದ ಪ್ರಯುಕ್ತ ಸಾಣೇಹಳ್ಳಿ ಶಿವಸಂಚಾರದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ “ಸೂಳೆ ಸಂಕವ್ವ ” ನಾಟಕವನ್ನು ಪ್ರಸ್ತುತ ಪಡಿಸುತಿದ್ದೇವೆ.
ತಂಗಮಾಲೆ
ಪ್ರತಿ ತಿಂಗಳ 2ನೇ ಶನಿವಾರ ಸಂಜೆ ನಾಡಿನ ಮತ್ತು ರಾಷ್ಟ್ರೀಯ ಮಟ್ಟದ ವಿಶೇಷ ನಾಟಕಗಳ ಪ್ರದರ್ಶನ ತಿಂಗಳ ರಂಗಮಾಲಿಕೆಯಲ್ಲಿ ಪ್ರದರ್ಶನಗೊಳ್ಳುತ್ತವೆ. ನಾಡಿನಾದ್ಯಂತ ಹಾಗೂ ರಾಷ್ಟ್ರಮಟ್ಟದ ನಾಟಕಗಳನ್ನು ಗ್ರಾಮೀಣ ಭಾಗದಲ್ಲಿ ಆಯೋಜಿಸಿ ರಂಗಸಂಸ್ಕೃತಿ ಬೆಳೆಸುವುದು ನಮ್ಮ ತಂಡದ ಮಹಾಯೋಜನೆಯೇ ಈ ರಂಗಮಾಲೆ
1 Comment
ಒಂದು ಉತ್ತಮ ಶರಣರ ನಾಟಕ. ನೋಡ ಬನ್ನಿ ಹಾರೈಸ ಬನ್ನಿ.