ಬೆಂಗಳೂರು : ಕೋಲಾರ ಜಿಲ್ಲೆಯ ‘ಸಾರಂಗರಂಗ (ರಿ.)’ ಇವರು ಆಯೋಜಿಸುತ್ತಿರುವ ‘ಆಜೀವಿಕ’ ಅಭಿನಯಿಸುವ ‘ಮರೆತದಾರಿ’ ನಾಟಕ ಪ್ರದರ್ಶನವು ದಿನಾಂಕ 01 ಡಿಸೆಂಬರ್ 2024ರಂದು ಬೆಳಿಗ್ಗೆ 11-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಈ ನಾಟಕದ ರಚನೆ : ಲಕ್ಷ್ಮೀಪತಿ ಕೋಲಾರ, ನಿರ್ದೇಶನ : ಡಾ. ಉದಯ್ ಸೋಸಲೆ, ಸಹ ನಿರ್ದೇಶನ : ವಾಸವಿ, ಸಂಗೀತ: ಹನುಮಂತ್ ಮಂಡ್ಯ, ಬೆಳಕು : ಮಹದೇವಸ್ವಾಮಿ ಮತ್ತು ಪ್ರಸಾಧನ : ಮೋಹನ್ ಕುಮಾರ್ ಇವರದ್ದು. ಹೆಚ್ಚಿನ ಮಾಹಿತಿ ಹಾಗೂ ಟಿಕೆಟ್ ಸಂಪರ್ಕಿಸಿರಿ ಪಿಚ್ಚಲ್ಲಿ ಶ್ರೀನಿವಾಸ 9448032328 ಮತ್ತು ಡಾ. ಉದಯ್ ಸೋಸಲೆ 9535831039.
“ತಾಯನ್ನೇ ಮರೆತೋರಿಗೇ | ಇಂಥ ಕನಸು ಕಾಡಲಿ | ಪೂರ್ವಿಕರ ಹಾದಿ ತೊರೆದ | ಪ್ರತಿ ಎದೆಗೂ ತಾಕಲಿ” ಆಜೀವಿಕ ತಂಡದ ಹೆಮ್ಮೆಯ ಪ್ರಯೋಗವಾದ ‘ಮರೆತ ದಾರಿ’ ನಾಟಕವು ದ್ರಾವಿಡರ ಪೂರ್ವಜರು ಸಾವಿರಾರು ವರ್ಷಗಳ ಅಲೆದಾಟದ ನಡುವೆಯೂ ತಮ್ಮ ನೆನಪಿನ ಹೊತ್ತಿಗೆಯಲ್ಲಿ ಜತನವಾಗಿ ಕಾಪಾಡಿಕೊಂಡು ಬಂದ ಸಂಸ್ಕೃತಿಯ ಮೂಲ ಬೇರು ಮೂಲ ಮಹಾಮಾತೆಯ ಕುರಿತ ಇತಿಹಾಸ – ಪುರಾಣಗಳ ಸಮ್ಮಿಲನದ ಕಥನವನ್ನು ಎಳೆಎಳೆಯಾಗಿ ಬಿಚ್ಚಿಡುತ್ತ ಹೋಗುತ್ತದೆ. ಸಂಸ್ಕೃತಿಯ ಮೂಲವೇ ಪಲ್ಲಟಗೊಂಡಿರುವ ಇಂದಿನ ವಿಷಮತೆಯಲ್ಲಿ ‘ಮರೆತ ದಾರಿ’ಯು ಪ್ರತಿ ಪ್ರೇಕ್ಷಕನನ್ನೂ ಆತ್ಮಾವಲೋಕನಕ್ಕೆ ಹಚ್ಚುತ್ತೆ. ಇದು ಕೇವಲ ನಾಟಕವಲ್ಲ. ಸಂಶೋಧನೆಯೇ ಸನ್ನಿವೇಶಗಳಾಗಿ, ರಂಗದ ಪಾತ್ರಗಳಾಗಿ ಮೈದಾಳುವ ಮಾಂತ್ರಿಕ ವಾಸ್ತವತೆ!