ಮೈಸೂರು : ಜೆ.ಎಸ್.ಎಸ್. ಸಂಗೀತ ಸಭಾ ಟ್ರಸ್ಟ್ (ರಿ.) ಮೈಸೂರು ಮತ್ತು ಜೆ.ಎಸ್.ಎಸ್. ಮಹಾವಿದ್ಯಾಪೀಠ ಇವರ ಆಶ್ರಯದಲ್ಲಿ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಸಂಸ್ಮರಣ ಪ್ರಯುಕ್ತ ಇಪ್ಪತ್ತೊಂಬತ್ತನೆಯ ‘ಸಂಗೀತ ಸಮ್ಮೇಳನ 2024’ವನ್ನು ದಿನಾಂಕ 02 ಡಿಸೆಂಬರ್ 2024ರಿಂದ 06 ಡಿಸೆಂಬರ್ 2024ರವರೆಗೆ ಮೈಸೂರಿನ ಜೆ.ಎಸ್.ಎಸ್. ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ದಿನಾಂಕ 02 ಡಿಸೆಂಬರ್ 2024ರಂದು ಸಂಜೆ 5-30 ಗಂಟೆಗೆ ಸಮ್ಮೇಳನಾಧ್ಯಾಕ್ಷರಾದ ವೈಣಿಕ ವಿದ್ವಾನ್ ಡಾ. ರಾ. ವಿಶ್ವೇಶ್ವರನ್ ಇವರನ್ನು ಜೆ.ಎಸ್.ಎಸ್. ಮಹಿಳಾ ಕಾಲೇಜಿನ ಮುಖ್ಯದ್ವಾರದಿಂದ ಮೆರವಣಿಗೆಯೊಂದಿಗೆ ಸ್ವಾಗತಿಸಲಾಗುವುದು. ಇಸ್ರೋ ಮಾಜಿ ಅಧ್ಯಕ್ಷರಾದ ಡಾ. ಎ.ಎಸ್. ಕಿರಣ್ ಕುಮಾರ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿರುವರು. ಇದೇ ಸಂದರ್ಭದಲ್ಲಿ ಸುರತ್ಕಲ್ಲಿನ ಕಲಾಪೋಷಕರು ಮತ್ತು ಸಂಘಟಕರಾದ ಶ್ರೀ ಪಿ. ನಿತ್ಯಾನಂದ ರಾವ್ ಇವರಿಗೆ ‘ಸಂಗೀತ ಸೇವಾನಿಧಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಜೆ 7-00 ಗಂಟೆಗೆ ನಡೆಯಲಿರುವ ಸಂಗೀತ ಕಾರ್ಯಕ್ರಮದಲ್ಲಿ ವಿದ್ವಾನ್ ಡಾ. ರಾ. ವಿಶ್ವೇಶ್ವರನ್ – ವೀಣೆ, ವಿದ್ವಾನ್ ಕೆ.ವಿ. ಪ್ರಸಾದ್ – ಮೃದಂಗ ಮತ್ತು ವಿದ್ವಾನ್ ಜಿ.ಎಸ್. ರಾಮಾನುಜನ್ – ಘಟಂನಲ್ಲಿ ಸಹಕರಿಸಲಿದ್ದಾರೆ.
ದಿನಾಂಕ 03 ಡಿಸೆಂಬರ್ 2024ರಂದು ಬೆಳಗ್ಗೆ 10-00 ಗಂಟೆಗೆ ವಿದ್ವತ್ ಗೋಷ್ಠಿಯಲ್ಲಿ ವಿದ್ವಾನ್ ಡಾ. ಕೆ. ವರದರಂಗನ್ ಇವರಿಂದ ಅತ್ಯಾಧುನಿಕ ಸಂಶ್ಲೇಶಿತ ಭಾರತೀಯ ತಾಳವಾದ್ಯಗಳ ಬಗ್ಗೆ ಪ್ರಾತ್ಯಕ್ಷಿಕೆ, ವಿದ್ವಾನ್ ಡಾ. ರಾ. ವಿಶ್ವೇಶ್ವರನ್ ಇವರಿಂದ ರಾಗಮಾಲಿಕೆ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಲಿದೆ. ಸಂಜೆ 5-30 ಗಂಟೆಗೆ ಸಂಗೀತ ಕಾರ್ಯಕ್ರಮದಲ್ಲಿ ವಿದುಷಿ ಅಕ್ಷತಾ ರುದ್ರಪಟ್ಟಣ ಇವರ ಗಾಯನಕ್ಕೆ ವಿದ್ವಾನ್ ಕಾರ್ತಿಕೇಯ ರಾಮಚಂದ್ರ ವಯೊಲಿನ್ ಮತ್ತು ವಿದ್ವಾನ್ ನಂದನ್ ಕಶ್ಯಪ್ ಮೃದಂಗದಲ್ಲಿ ಹಾಗೂ ವಿದ್ವಾನ್ ಎಸ್. ಸಾಕೇತ ರಾಮನ್ ಇವರ ಗಾಯನಕ್ಕೆ ವಿದ್ವಾನ್ ಮತ್ತೂರು ಆರ್. ನಿಧಿ ವಯೊಲಿನ್, ವಿದ್ವಾನ್ ಅರ್ಜುನ್ ಕುಮಾರ್ ಮೃದಂಗ ಮತ್ತು ವಿದ್ವಾನ್ ಶಮಿತ್ ಎಸ್. ಗೌಡ ಘಟಂನಲ್ಲಿ ಸಹಕರಿಸಲಿದ್ದಾರೆ.
ದಿನಾಂಕ 04 ಡಿಸೆಂಬರ್ 2024ರಂದು ಬೆಳಗ್ಗೆ 10-00 ಗಂಟೆಗೆ ವಿದ್ವತ್ ಗೋಷ್ಠಿಯಲ್ಲಿ ವಿದುಷಿ ಕೃತಿಕಾ ಶ್ರೀ ನಿವಾಸನ್ ಇವರಿಂದ ‘ಕನ್ನಡ ಕಾವ್ಯದಲ್ಲಿ ಲಯ’ ಎಂಬ ವಿಷಯದ ಬಗ್ಗೆ ಪ್ರಾತ್ಯಕ್ಷಿಕೆ, ವಿದುಷಿ ಮಾನಸೀ ಪ್ರಸಾದ್ ಇವರಿಂದ ‘ಪಲ್ಲವಿಗಳ ಪ್ರಪಂಚ’ ಎಂಬ ವಿಷಯದ ಪ್ರಾತ್ಯಕ್ಷಿಕೆ ನಡೆಯಲಿದೆ. ಸಂಜೆ 5-30 ಗಂಟೆಗೆ ಸಂಗೀತ ಕಾರ್ಯಕ್ರಮದಲ್ಲಿ ವಿದುಷಿ ರಕ್ಷಿತಾ ರಮೇಶ್ ವೀಣೆ ಮತ್ತು ವಿದ್ವಾನ್ ವಿಷ್ಣು ವರ್ಧನ ಮೃದಂಗದಲ್ಲಿ ಹಾಗೂ ವಿದ್ವಾನ್ ಡಾ. ವಿದ್ಯಾಭೂಷಣ ಇವರ ಗಾಯನಕ್ಕೆ ವಿದ್ವಾನ್ ಪ್ರಾದೇಶಾಚರ್ ವಯೊಲಿನ್, ವಿದ್ವಾನ್ ವಿ. ಪ್ರವೀಣ್ ಮೃದಂಗ ಮತ್ತು ವಿದ್ವಾನ್ ಬಿ.ಎಸ್. ರಘುನಂದನ್ ಘಟಂನಲ್ಲಿ ಸಹಕರಿಸಲಿದ್ದಾರೆ.
ದಿನಾಂಕ 05 ಡಿಸೆಂಬರ್ 2024ರಂದು ಬೆಳಗ್ಗೆ 10-00 ಗಂಟೆಗೆ ವಿದ್ವತ್ ಗೋಷ್ಠಿಯಲ್ಲಿ ವಿದ್ವಾನ್ ರಾವ್ ಆರ್. ಶರತ್ ಇವರಿಂದ ‘ಕರ್ನಾಟಕ ಸಂಗೀತದಲ್ಲಿ ಗ್ರಹಭೇದ ಒಂದು ಒಳನೋಟ’ ಎಂಬ ವಿಷಯದ ಬಗ್ಗೆ ಪ್ರಾತ್ಯಕ್ಷಿಕೆ, ವಿದ್ವಾನ್ ಬಿ.ಸಿ. ಮಂಜುನಾಥ್ ಇವರಿಂದ ‘ಮೃದಂಗ ವಾದನಡ ಸೂಕ್ಷ್ಮತೆಗಳು ಮತ್ತು ವಿಶೇಷತೆಗಳು’ ಎಂಬ ವಿಷಯದ ಪ್ರಾತ್ಯಕ್ಷಿಕೆ ನಡೆಯಲಿದೆ. ಸಂಜೆ 5-30 ಗಂಟೆಗೆ ಸಂಗೀತ ಕಾರ್ಯಕ್ರಮದಲ್ಲಿ ವಿದ್ವಾನ್ ಪ್ರಣವ್ – ಕೊಳಲು, ವಿದ್ವಾನ್ ರತ್ನತೇಜ – ವಯೊಲಿನ್ ಮತ್ತು ವಿದ್ವಾನ್ ಪ್ರಣವ್ ಸುಬ್ರಹ್ಮಣ್ಯ – ಮೃದಂಗದಲ್ಲಿ ಹಾಗೂ ವಿದ್ವಾನ್ ಎನ್. ರವಿಕಿರಣ್ ಇವರ – ಚಿತ್ರವೀಣಾ, ವಿದುಷಿ ಗಾಯತ್ರಿ ಶಿವಾನಿ – ವಯೊಲಿನ್, ವಿದ್ವಾನ್ ಎಚ್.ಎಸ್. ಸುಧೀಂದ್ರ – ಮೃದಂಗ ಮತ್ತು ವಿದ್ವಾನ್ ಶರತ್ ಕೌಶಿಕ್ ಘಟಂನಲ್ಲಿ ಸಹಕರಿಸಲಿದ್ದಾರೆ.
ದಿನಾಂಕ 06 ಡಿಸೆಂಬರ್ 2024ರಂದು ಸಂಜೆ 5-30 ಗಂಟೆಗೆ ಸಂಗೀತ ಕಾರ್ಯಕ್ರಮದಲ್ಲಿ ವಿದುಷಿ ಭಾರ್ಗವಿ ವೆಂಕಟರಾಂ ಇವರ ಗಾಯನಕ್ಕೆ ವಿದ್ವಾನ್ ವೈಭವ್ ರಮಣಿ ವಯೊಲಿನ್, ವಿದ್ವಾನ್ ಬಿ.ಎಸ್. ಪ್ರಶಾಂತ್ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಬಳಿಕ ನಡೆಯಲಿರುವ ಸಮಾರೋಪದಲ್ಲಿ ವೈಣಿಕ ವಿದ್ವಾನ್ ಡಾ. ರಾ. ವಿಶ್ವೇಶ್ವರನ್ ಇವರಿಗೆ ‘ಸಂಗೀತ ವಿದ್ಯಾನಿಧಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.