ಮಂಗಳೂರು : ಕಾದಂಬರಿಕಾರ ಕಿಶೋರ್ ರಾಜ್ ಬರೆದಿರುವ ಹಿಂದಿ ಕಾದಂಬರಿ ‘ಮೇರಿ ಖಾಮೋಶಿ ಮೇರಿ ಅವಾಜ್’ ಇದರ ಲೋಕರ್ಪಣಾ ಸಮಾರಂಭವು ದಿನಾಂಕ 1 ಡಿಸೆಂಬರ್ 2024ರ ಭಾನುವಾರದಂದು ಮಂಗಳೂರಿನ ಓಶಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಕಾದಂಬರಿ ಲೋಕಾರ್ಪಣೆಗೊಳಿಸಿದ ಸಾಹಿತಿ ಗೋಕುಲ್ ರೂಪರೇಲಿ ಮಾತನಾಡಿ “ಹಿಂದಿ ಭಾಷಾ ಪ್ರಿಯರಿಗೆ ಇದೊಂದು ರಸದೌತಣ. ಕೊಲೆ ರಹಸ್ಯ ಕಂಡು ಹಿಡಿಯುವ ಡ್ರಿಲ್ಲರ್ ಕಥೆಯನ್ನು ಕಾದಂಬರಿ ಹೊಂದಿದೆ.” ಎಂದರು.
ಭೂಪೇಂದ್ರ ಆರ್.ರಾಜ್, ಬಿಪಿನ್ ಆರ್.ರಾಜ್, ಗೋವಿಂದ್ ಭಟ್, ಹೀನಾ ಜಗದೀಶ್ ಉಪಸ್ಥಿತರಿದ್ದರು.