ಪುತ್ತೂರು : ಪಾಲಿಂಜೆ ಶ್ರೀ ಮಹಾವಿಷ್ಣು ದೇವಳದಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ವಿಂಶತಿ ಸಂಭ್ರಮದ ಅಂಗವಾಗಿ 17ನೇ ಸರಣಿ ತಾಳಮದ್ದಳೆ ಬೋಳೂರು ಮಧು ಕುಮಾರ್ ವಿರಚಿತ ‘ಸುದರ್ಶನ ವಿಜಯ’ ಎಂಬ ಆಖ್ಯಾನದೊಂದಿಗೆ ದಿನಾಂಕ 01 ಡಿಸೆಂಬರ್ 2024ರಂದು ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ಆನಂದ ಸವಣೂರು ಹಾಗೂ ಚೆಂಡೆ, ಮದ್ದಲೆಗಳಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ತಾರಾನಾಥ ಸವಣೂರು ಮತ್ತು ಮಾಸ್ಟರ್ ಪರೀಕ್ಷಿತ್ ಹಂದ್ರಟ್ಟ ಸಹಕರಿಸಿದರು. ಮುಮ್ಮೇಳದಲ್ಲಿ ಕಿಶೋರಿ ದುಗ್ಗಪ್ಪ ನಡುಗಲ್ಲು (ಮಹಾವಿಷ್ಣು), ಜಯಂತಿ ಹೆಬ್ಬಾರ್ (ಮಹಾಲಕ್ಷ್ಮಿ), ಶುಭಾ ಗಣೇಶ್ (ಸುದರ್ಶನ), ಪ್ರೇಮಲತಾ ರಾವ್ (ದೇವೇಂದ್ರ), ಹರಿಣಾಕ್ಷಿ ಜೆ. ಶೆಟ್ಟಿ (ಶತ್ರು ಪ್ರಸೂದನ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಶ್ರವಣಕುಮಾರ ಮತ್ತು ರಮೇಶ್ ಅಂಗಿಂತ್ತಾಯ ಕಲಾವಿದರಿಗೆ ಶ್ರೀ ದೇವರ ಪ್ರಸಾದವನ್ನಿತ್ತು ಗೌರವಿಸಿದರು. ಪ್ರೇಮಲತಾ ರಂಗನಾಥ್ ರಾವ್ ಪ್ರಾಯೋಜಿಸಿದ್ದರು.