ಮಂಗಳೂರು : ರಾಗತರಂಗ (ರಿ.) ಮಂಗಳೂರು ಇದರ ವತಿಯಿಂದ ಭಾರತೀಯ ವಿದ್ಯಾಭವನ ಮಂಗಳೂರು ಸಹಯೋಗದೊಂದಿಗೆ ‘ಬಾಲ ಪ್ರತಿಭಾ 2024’ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಶಾಲಾ ಮಕ್ಕಳ ಸಾಂಸ್ಕೃತಿಕ ಸ್ಪರ್ಧೆಗಳನ್ನು ದಿನಾಂಕ 13 ಡಿಸೆಂಬರ್ 2024ರಿಂದ 15 ಡಿಸೆಂಬರ್ 2024ರವರೆಗೆ ಮಂಗಳೂರಿನ ಪಾಂಡೇಶ್ವರದ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಾಯಿಸಲು 06 ಡಿಸೆಂಬರ್ 2024 ಕೊನೆಯ ದಿನಾಂಕವಾಗಿದ್ದು, ದಿನಾಂಕ 13 ಡಿಸೆಂಬರ್ 2024ರಂದು ರಾಜ್ಯ ಸರ್ಕಾರಿ ಶಾಲಾ ಮಕ್ಕಳಿಗೆ ದೇಶ ಭಕ್ತಿ ಗೀತೆ ಸಮೂಹ ಗಾನ, ಸುಗಮ ಸಂಗೀತ ಮತ್ತು ಆಶು ಭಾಷಣ ಸ್ಪರ್ಧೆಗಳು ನಡೆಯಲಿದೆ. ದಿನಾಂಕ 13 ಡಿಸೆಂಬರ್ 2024, 14 ಡಿಸೆಂಬರ್ 2024 ಮತ್ತು 15 ಡಿಸೆಂಬರ್ 2024ರಂದು ಖಾಸಗಿ ಹಾಗೂ ಕೇಂದ್ರೀಯ ವಿದ್ಯಾಲಯದ ಮಕ್ಕಳಿಗೆ ಸಾಮಾನ್ಯ ಜ್ಞಾನ, ಛದ್ಮವೇಷ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಭಾವಗೀತೆ, ಭರತನಾಟ್ಯ, ಜನಪದ ನೃತ್ಯ, ಕರ್ನಾಟಕ ವಾದ್ಯ ಸಂಗೀತ, ಹಿಂದೂಸ್ಥಾನಿ ವಾದ್ಯ ಸಂಗೀತ ಸ್ಪರ್ಧೆಗಳು ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಶ್ರೀಮತಿ ಮಮತಾ ಎಂ.ಎಸ್. 9448792748 ಮತ್ತು ಶ್ರೀ ಜಯಪ್ರಕಾಶ್ ಶೆಟ್ಟಿ 8618523830 ಇವರನ್ನು ಸಂಪರ್ಕಿಸಿರಿ.