ಮಂಗಳೂರು : ಮಂಗಳೂರಿನ ಸನಾತನ ನಾಟ್ಯಾಲಯ ಹಾಗೂ ನೃತ್ಯಾಂಗನ್ ಸಂಸ್ಥೆಗಳು ಜಂಟಿಯಾಗಿ ಆಯೋಜಿಸುವ ವೈಭವ್ ಆರೆಕಾರ್ ಹಾಗೂ ಸಂಖ್ಯಾ ಡಾನ್ಸ್ ಕಂಪೆನಿ ಇವರಿಂದ ‘ನಿಬಂಧನ’ ಭರತನಾಟ್ಯ ಕಾರ್ಯಕ್ರಮವು ದಿನಾಂಕ 08 ಡಿಸೆಂಬರ್ 2024ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ವೈಭವ್ ಆರೆಕಾರ್, ಈಶಾ ಪಿಂಗಳೆ, ಪೂರ್ವಾ ಸಾರಸ್ವತ್, ರಾಧಿಕಾ ಕರಂಡಿಕಾರ್, ಮೃಣಾಲ್ ಜೋಶಿ, ಅದಿತಿ ಪಾರಂಜಪೆ, ಶ್ರುತಿ ರಾನಡೆ ಹಾಗೂ ಅನು ಕ್ರಿಸ್ಟಿ ಪಿಳ್ಳೈ ಇವರುಗಳು ಭರತನಾಟ್ಯ ನೃತ್ಯ ಪ್ರದರ್ಶನ ನೀಡಲಿದ್ದು, ಇವರಿಗೆ ಹಾಡುಗಾರಿಕೆಯಲ್ಲಿ ಕಾರ್ತಿಕ್ ಹೆಬ್ಬಾರ್, ನಟುವಾಂಗದಲ್ಲಿ ಕಳೀಸ್ವರಂ ಪಿಳ್ಳೈ, ಮೃದಂಗದಲ್ಲಿ ದಕ್ಷಿಣಾಮೂರ್ತಿ ಪಿಳ್ಳೈ ಹಾಗೂ ಕೊಳಲಿನಲ್ಲಿ ಜಯರಾಂ ಕಿಕ್ಕೇರಿ ಸಹಕರಿಸಲಿದ್ದಾರೆ. ಕಾರ್ಯಕ್ರಮದ ಬೆಳಕಿನ ವಿನ್ಯಾಸ ಸುಶಾಂತ್ ಜಾದವ್ ಇವರದ್ದು.
ಹೆಚ್ಚಿನ ಮಾಹಿತಿ ಹಾಗೂ ಕಾರ್ಯಕ್ರಮದ ಟಿಕೆಟ್ ಗಳಿಗಾಗಿ 98451 69506 ಅಥವಾ 98450 91838 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.