ಕಾಸರಗೋಡು : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಕಾಸರಗೋಡು ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಮತ್ತು ಕನ್ನಡ ಗ್ರಾಮ ಕಾಸರಗೋಡು ಇದರ ಸಹಯೋಗದಲ್ಲಿ ಒಂದು ದಿನದ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ 2024 ‘ಕೇರಳ – ಕರ್ನಾಟಕ ಮಕ್ಕಳ ಉತ್ಸವ’ ದಿನಾಂಕ 10 ನವೆಂಬರ್ 2024ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಕನ್ನಡ ಗ್ರಾಮದ ಪರಿಸರ, ವೇದಿಕೆ ಮತ್ತು ಮನೆಯಂಗಳದಲ್ಲಿ ಕಾಸರಗೋಡು ಜಿಲ್ಲೆಯ ಶಾಲಾ ಮಕ್ಕಳಿಗಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಸುಮಾರು 100ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದರು.
ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 15 ದಶಂಬರ್ 2024 ಆದಿತ್ಯವಾರದಂದು ಅಪರಾಹ್ನ 3-00 ಗಂಟೆಗೆ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಹಾಗೂ ಹೆತ್ತವರು, ಪೋಷಕರು, ಅಧ್ಯಾಪಕರು ಸ್ಪರ್ಧಾ ತೀರ್ಪುಗಾರರ ಸಮ್ಮುಖದಲ್ಲಿ ಸಮ್ಮೇಳನದ ಸ್ಪರ್ಧೆಯ ವಿಜೇತರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಸ್ಪರ್ಧಾ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಸ್ಮರಣೆಕೆಗಳನ್ನು ನೀಡಿ ಗೌರವಿಸಲಾಗುವುದು.
ವಿವಿಧ ಸ್ಪರ್ಧೆಯ ವಿಜೇತರು
ಚಿತ್ರರಚನೆ – ಪೆನ್ಸಿಲ್ ಡ್ರಾಯಿಂಗ್ ಎಲ್.ಪಿ. ವಿಭಾಗ (ಕಿರಿಯ ಪ್ರಾಥಮಿಕ ಶಾಲೆ)
ಪ್ರಥಮ – ಗೌತಮ್, ಶ್ರೀ ಗೋಪಾಲಕೃಷ್ಣ ಹೈಸ್ಕೂಲ್ ಕೂಡ್ಲು ಎಸ್.ಜಿ.ಕೆ.ಎಚ್.ಎಸ್. ಕೂಡ್ಲು
ದ್ವಿತೀಯ – ಸಿದ್ಧಾರ್ಥ ಗೌಡ, ಪಾಟೀಲ ಕೆ.ಎಲ್.ಇ.ಎಂ.ಆರ್.ಎಸ್. ಹುಬ್ಬಳ್ಳಿ
ಚಿತ್ರರಚನೆ ಯು.ಪಿ. ವಿಭಾಗ (ಹಿರಿಯ ಪ್ರಾಥಮಿಕ ಶಾಲೆ)
ಪ್ರಥಮ – ಧೃವಿತ್ ಕೆ., ಜೈ ಮಾತಾ ಸ್ಕೂಲ್ ಕೋಟೆಕಣಿ ಕಾಸರಗೋಡು
ದ್ವಿತೀಯ – ಆರುಶಿ ಎನ್., ಚಿನ್ಮಯ ವಿದ್ಯಾಲಯ ಕಾಸರಗೋಡು
ಚಿತ್ರರಚನೆ ಹೈಸ್ಕೂಲ್ ವಿಭಾಗ (ಪ್ರೌಢಶಾಲೆ ಹೈಸ್ಕೂಲ್ )
ಪ್ರಥಮ – ಜಶ್ನ ವಿ. ಶೆಟ್ಟಿ, ಜಿ.ವಿ.ಎಚ್.ಎಸ್.ಎಸ್. ಗರ್ಲ್ಸ್ ನೆಲ್ಲಿಕುನ್ನು ಕಾಸರಗೋಡು
ದ್ವಿತೀಯ – ಗಾಯತ್ರಿ, ಜಿ.ಎಚ್.ಎಸ್.ಎಸ್. ಬೇಕೂರ್
ರಸಪ್ರಶ್ನೆ ಎಲ್.ಪಿ. ವಿಭಾಗ
ಪ್ರಥಮ – ರಫಾ ಫಾತಿಮಾ, ಎಚ್.ಎಚ್.ಯು.ಪಿ.ಎಸ್. ಚಿಪ್ಪಾರ್
ದ್ವಿತೀಯ – ಸಿದ್ಧಾರ್ಥ್, ಗೌಡ ಪಾಟೀಲ್ ಕೆ.ಎಲ್.ಇ.ಎಂ.ಆರ್.ಎಸ್. ಹುಬ್ಬಳ್ಳಿ
ತೃತೀಯ – ಸಾನ್ವಿಕ, ಚಿನ್ಮಯ ವಿದ್ಯಾಲಯ ಕಾಸರಗೋಡು
ರಸಪ್ರಶ್ನೆ ಯು.ಪಿ. ವಿಭಾಗ
ಪ್ರಥಮ – ಧ್ಯೇಯ, ಸಂತ ಜೋಸೆಫ್ ಸ್ಕೂಲ್ ಕಲಿಯೂರ್
ದ್ವಿತೀಯ – ಸಮೃದ್ಧಿ ಆಳ್ವ, ಸಂತ ಜೋಸೆಫ್ ಸ್ಕೂಲ್ ಕಲಿಯೂರ್
ತೃತೀಯ – ಆಸ್ತ ಕೆ., ಎ.ಯು.ಪಿ. ಸ್ಕೂಲ್ ಬೋವಿಕಾನ
ರಸಪ್ರಶ್ನೆ ಹೈಸ್ಕೂಲ್ ವಿಭಾಗ
ಪ್ರಥಮ – ಖದೀಜ ಸಫ, ಎಸ್.ಡಿ.ಪಿ.ಎಚ್. ಸ್ಕೂಲ್ ಧರ್ಮತಡ್ಕ
ದ್ವಿತೀಯ – ಚಿತ್ರಿತ ಕೆ.ಎಂ., ಎಸ್.ಜಿ.ಕೆ.ಎಚ್. ಸ್ಕೂಲ್ ಕೂಡ್ಲು
ಸಣ್ಣ ಕಥಾ ಸ್ಪರ್ಧೆ ಯು.ಪಿ. ವಿಭಾಗ
ಪ್ರಥಮ – ಧ್ಯೇಯ, ಸಂತ ಜೋಸೆಫ್ ಎ.ಯು.ಪಿ.ಎಸ್. ಸ್ಕೂಲ್ ಕಲಿಯೂರ್
ದ್ವಿತೀಯ – ಸಮೃದ್ಧಿ, ಜಿ.ಯು.ಪಿ. ಸ್ಕೂಲ್ ಕಾಸರಗೋಡು
ಛದ್ಮ ವೇಷ ಸ್ಪರ್ಧೆ ಎಲ್.ಪಿ.ವಿಭಾಗ
ಪ್ರಥಮ – ಕೃಪೇಶ್ ಜಿ.ಎಸ್., ಎಂ.ಎ.ಯು.ಪಿ. ಸ್ಕೂಲ್ ಕಲ್ಲಕಟ್ಟ
ದ್ವಿತೀಯ – ಅದ್ವಿಕ್, ಚಿನ್ಮಯ ವಿದ್ಯಾಲಯ ಕಾಸರಗೋಡು
ಏಕ ಪಾತ್ರಾಭಿನಯ ಸ್ಪರ್ಧೆ ಎಲ್.ಪಿ. ವಿಭಾಗ
ಪ್ರಥಮ – ಧ್ಯೇಯ, ಸಂತ ಜೋಸೆಫ್ ಎ.ಯು.ಪಿ.ಎಸ್. ಸ್ಕೂಲ್ ಕಲಿಯೂರ್
ದ್ವಿತೀಯ – ಆಸ್ತ ಎ., ಎ.ಯು.ಪಿ.ಎಸ್. ಸ್ಕೂಲ್ ಬೋವಿಕಾನ
ಏಕ ಪಾತ್ರಾಭಿನಯ ಸ್ಪರ್ಧೆ ಹೈಸ್ಕೂಲ್
ಪ್ರಥಮ – ಆಶಿಕ ರೈ, ಜಿ.ಎಚ್.ಎಸ್.ಎಸ್. ಬೇಕೂರ್
ವಾರ್ತಾಪತ್ರಿಕೆ ಓದುವ ಸ್ಪರ್ಧೆ ಯು.ಪಿ. ವಿಭಾಗ
ಪ್ರಥಮ – ಸಮೃದ್ಧಿ ಆಳ್ವ, ಜಿ.ಯು.ಪಿ. ಸ್ಕೂಲ್ ಕಾಸರಗೋಡು
ದ್ವಿತೀಯ – ಆರುಶಿ ಎನ್. ಚಿನ್ಮಯ ವಿದ್ಯಾಲಯ ಕಾಸರಗೋಡು
ತೃತೀಯ – ಅತಿಕ್ಷಾ, ಜಿ.ಯು.ಪಿ. ಸ್ಕೂಲ್ ಕಾಸರಗೋಡು
ವಾರ್ತಾ ಪತ್ರಿಕೆ ಓದುವ ಸ್ಪರ್ಧೆ ಹೈಸ್ಕೂಲ್
ಪ್ರಥಮ – ಮೇಧ ಭಟ್ ಬಿ. ಇ., ಎಂ.ಎಚ್.ಎಸ್.ಎಸ್. ಕಾಸರಗೋಡು
ದ್ವಿತೀಯ – ಖದೀಜ ಸಫಾ, ಎಸ್.ಪಿ.ಪಿ.ಎಚ್.ಎಸ್. ಧರ್ಮತಡ್ಕ
ತೃತೀಯ – ಐಶ್ವರ್ಯ ಜಿ.ಎಸ್., ಜಿ.ವಿ.ಎಚ್.ಎಸ್.ಎಸ್. ಫಾರ್ ಗರ್ಲ್ಸ್ ನೆಲ್ಲಿಕುನ್ನು ಕಾಸರಗೋಡು