ಬೆಂಗಳೂರು : ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ವತಿಯಿಂದ ಕೊಡವ ಕಥೆ ಜೊಪ್ಪೆಯನ್ನು ಹೊರತರಲು ಸೂಕ್ತ ಕತೆಗಳನ್ನು ಆಹ್ವಾನಿಸಲಾಗಿದೆ. ಕಥೆ ಜೊಪ್ಪೆಯಲ್ಲಿ ಸುಮಾರು 25 ರಿಂದ 30ರಷ್ಟು ಕತೆಗಳನ್ನು ಒಂದೇ ಪುಸ್ತಕದಲ್ಲಿ ಪ್ರಕಟಿಸಲಾಗುವುದು. ಕತೆಗಳನ್ನು ಎ4 ಅಳತೆಯ ಕಾಗದದಲ್ಲಿ ಸ್ಪುಟವಾಗಿ 5-6 ಪುಟ ಮೀರದಂತೆ ಬರೆಯಬೇಕು. ಕಥೆಗಳು ಸಾಧ್ಯವಾದಷ್ಟು ಕೊಡವ ಸಂಸ್ಕೃತಿ, ಪದ್ಧತಿ ಹಾಗೂ ಮೂಲತನಕ್ಕೆ ಒತ್ತುಕೊಡುವಂತಿದ್ದು ಸಾರ್ವಕಾಲಿಕವಾಗಿರಲಿ.
ಪ್ರಕಟಿತ ಕಥೆಗಳಿಗೆ ಅಕಾಡೆಮಿ ಗೊತ್ತುಪಡಿಸಿರುವಂತೆ ಸಂಭಾವನೆ ನೀಡಲಾಗುವುದು. ಕಥೆಗಾರರು 4-5 ವಾಕ್ಯಗಳಿಗೆ ವೀರದಂತೆ ಸ್ವಪರಿಚಯ, ಇತ್ತೀಚಿನ ಭಾವಚಿತ್ರದೊಂದಿಗೆ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಲಗತ್ತಿಸಿ 05 ಡಿಸೆಂಬರ್ 2025ರ ಒಳಗಾಗಿ ಅಧ್ಯಕ್ಷರು/ ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜೂನಿಯರ್ ಕಾಲೇಜು ರಸ್ತೆ, ಸೌಟ್ಸ್ ಭವನ, ಮ್ಯಾನ್ಸ್ ಕಾಂಪೌಂಡ್, ಮಡಿಕೇರಿ ಈ ವಿಳಾಸಕ್ಕೆ ಕಳುಹಿಸಬಹುದು.