ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಇದರ ವಾರ್ಷಿಕೋತ್ಸವ ಪ್ರಯುಕ್ತ ‘ಶ್ರೀ ಆಂಜನೇಯ 56’ ದಿನಾಂಕ 25 ಡಿಸೆಂಬರ್ 2024ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ.
ಬೆಳಗ್ಗೆ 9-00 ಗಂಟೆಗೆ ಈ ಕಾರ್ಯಕ್ರಮವು ಉದ್ಘಾಟನೆಗೊಳ್ಳಲಿದ್ದು, ಬಳಿಕ ಸಂಘದ ಸದಸ್ಯರಿಂದ ‘ಯಕ್ಷ ತಾಪಸಿಯರು – ಸಂವಾದ’ ಮತ್ತು ಭೀಷ್ಮ ಸೇನಾಧಿಪತ್ಯ – ಕರ್ಮಬಂಧ’ ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಆತ್ಮಾಲಯ ಕಲೆ ಮತ್ತು ಸಂಸ್ಕೃತಿ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ಭಾಗವತಹಂಸ ಶ್ರೀ ಪುತ್ತಿಗೆ ರಘುರಾಮ ಹೊಳ್ಳ ಇವರಿಗೆ ‘ಶ್ರೀಮತಿ ಶಾಂತಾ ಮತ್ತು ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
ಸಂಜೆ 4-30 ಗಂಟೆಗೆ ನಡೆಯಲಿರುವ ಸಭಾ ಕಲಾಪದ ಅಧ್ಯಕ್ಷತೆಯನ್ನು ಪುತ್ತೂರಿನ ಸ್ವರ್ಣೋದ್ಯಮಿ ರೊ. ಬಲರಾಮ ಆಚಾರ್ಯ ಇವರು ವಹಿಸಲಿದ್ದು, ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ವೇದಮೂರ್ತಿ ಹರಿನಾರಾಯಣದಾಸ ಆಸ್ರಣ್ಣ ಇವರು ಆಶೀರ್ವಚನ ನೀಡಲಿದ್ದಾರೆ. ಯಕ್ಷಗಾನ ಸಂಘಟಕ ಶ್ರೀ ಭುಜಬಲಿ ಧರ್ಮಸ್ಥಳ ಇವರಿಗೆ ‘ಶ್ರೀ ಯಕ್ಷಾಂಜನೇಯ ಪ್ರಶಸ್ತಿ’ ಮತ್ತು ಭಾಗವತ ಶ್ರೀಮತಿ ಭವ್ಯ ಶ್ರೀ ಕುಲ್ಕುಂದ ಇವರಿಗೆ ‘ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವಿಂಶತಿ ಗೌರವ’ ಪ್ರದಾನ ಮಾಡಲಾಗುವುದು.