ಈಶ್ವರಮಂಗಲ : ಶ್ರೀ ಅಯ್ಯಪ್ಪ ಸೇವಾ ಸಮಿತಿ ಬೆಳ್ಳಿಚೆಡವು ಈಶ್ವರಮಂಗಲ ಇದರ ದ್ವಿತೀಯ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಅಯ್ಯಪ್ಪ ದೀಪೋತ್ಸವದ ಪ್ರಯುಕ್ತ ದಿನಾಂಕ 12 ಡಿಸೆಂಬರ್ 2024ರಂದು ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಮಹಿಳಾ ಸದಸ್ಯರಿಂದ ‘ಸಮರ ಸನ್ನಾಹ – ಭೀಷ್ಮ ಸೇನಾಧಿಪಥ್ಯ’ ಯಕ್ಷಗಾನ ತಾಳಮದ್ದಳೆ ನಡೆಯಿತು.
ಯಕ್ಷಗುರು ವಿಶ್ವವಿನೋದ ಬನಾರಿ ಅವರ ಮಾರ್ಗದರ್ಶನದಲ್ಲಿ ಜರಗಿದ ಈ ತಾಳಮದ್ದಳೆಯ ಹಿಮ್ಮೇಳದಲ್ಲಿ ಮೋಹನ ಮೆಣಸಿನಕಾನ, ಮತ್ತು ಕುಮಾರಿ ವಿದ್ಯಾಶ್ರೀ ಆಚಾರ್ಯ ಈಶ್ವರಮಂಗಲ ಭಾಗವತರಾಗಿ ಕಾಣಿಸಿಕೊಂಡರು. ಚಂಡೆ ಮದ್ದಳೆ ವಾದನದಲ್ಲಿ ವಿಷ್ಣುಶರಣ ಬನಾರಿ ಹಾಗೂ ಶ್ರೀಧರ ಆಚಾರ್ಯ ಈಶ್ವರಮಂಗಲ ಸಹಕರಿಸಿದರು. ಅರ್ಥಧಾರಿಗಳಾಗಿ ಸರಿತಾ ರಮಾನಂದ ರೈ ದೇಲಂಪಾಡಿ, ಶಾಂತಕುಮಾರಿ ದೇಲಂಪಾಡಿ, ಜಲಜಾಕ್ಷಿ ಸತೀಶ್ ರೈ ಬೆಳ್ಳಿಪ್ಪಾಡಿ, ನಳಿನಾಕ್ಷಿ ಹರೀಶ್ ಗೌಡ ಮುದಿಯಾರು, ಸುಜಾತ ಮೋಹನ್ ದಾಸ ರೈ ದೇಲಂಪಾಡಿ, ಶೀಲಾವತಿ ಹೇಮನಾಥ್ ಕೇದಗಡಿ, ಸುಮಲತಾ ಉದಯ್ ಕುಮಾರ್ ದೇಲಂಪಾಡಿ, ಪವಿತ್ರ ದಿವಾಕರ ಮುದಿಯಾರು, ಕುಸುಮಾವತಿ ಜಯಪ್ರಕಾಶ್ ಕುತ್ತಿ ಮುಂಡ ಇವರುಗಳು ತಮ್ಮ ಕಲಾ ಪ್ರೌಢಿಮೆಯನ್ನು ತೋರಿಸಿಕೊಟ್ಟರು.
ನಾರಾಯಣ ದೇಲಂಪಾಡಿ ಅವರ ಅರ್ಥ ಸಾಹಿತ್ಯ ಪ್ರಸಂಗ ಎಂ. ರಮಾನಂದ ರೈ ದೇಲಂಪಾಡಿ ಅವರ ಸಂಯೋಜನೆಯಲ್ಲಿ ಪ್ರಸ್ತುತಗೊಂಡಿದ್ದು, ಜಲಜಾಕ್ಷಿ ರೈ ಪಾತ್ರ ಪರಿಚಯ ಮಾಡಿಕೊಟ್ಟರು. ಚಂದ್ರಶೇಖರ ಗುರುಸ್ವಾಮಿ ಅವರ ನೇತೃತ್ವದಲ್ಲಿ ಜರಗಿದ ಈ ಸಾಂಸ್ಕೃತಿಕ ಕಲಾ ಕಾರ್ಯಕ್ರಮವು ರಾಮನಾಯ್ಕ ದೇಲಂಪಾಡಿ ಅವರ ಪ್ರಾಯೋಜಕತ್ವದಲ್ಲಿ ನೆರವೇರಿತು.